ಸೋಮವಾರಪೇಟೆ, ಮಾ. ೩೧: ಸಮೀಪದ ಚನ್ನಾಪುರ-ಹಿರಿಕರ ರಾಮೇಶ್ವರ ಯೂತ್‌ಕ್ಲಬ್ ವತಿಯಿಂದ ನಡೆದ ಮುಕ್ತ ವಾಲಿಬಾಲ್ ಪಂದ್ಯಾವಳಿಯ ಪ್ರಶಸ್ತಿಯನ್ನು ಕೂಗೇಕೋಡಿ ಬಸವೇಶ್ವರ ಯೂತ್ ಕ್ಲಬ್ ತಂಡ ಮುಡಿಗೇರಿಸಿಕೊಂಡಿತು. ಟೀಮ್ ಶುಂಠಿ ರನ್ನರ್ ಅಪ್ ಆಯಿತು.

ಫೈನಲ್‌ನಲ್ಲಿ ಕೂಗೇಕೋಡಿ ಗ್ರಾಮ ತಂಡ ಶುಂಠಿ ಗ್ರಾಮ ತಂಡವನ್ನು ೧೫-೧೩ರಲ್ಲಿ ಮಣಿಸಿತು. ಮೊದಲ ಸೆಮಿಫೈನಲ್‌ನಲ್ಲಿ ಟೀಮ್ ಶುಂಠಿ ತಂಡ, ಎಪಿಪಿ ಬ್ರರ‍್ಸ್ ಹಿರಿಕರ ತಂಡವನ್ನು ಸೋಲಿಸಿ ಫೈನಲ್ ತಲುಪಿತ್ತು. ಎರಡನೇ ಸೆಮೀಸ್‌ನಲ್ಲಿ ಕೂಗೇಕೋಡಿ ಬಸವೇಶ್ವರ ತಂಡ ಶನಿವಾರಸಂತೆ ಸ್ಟೆöÊಕರ್ ತಂಡವನ್ನು ಮಣಿಸಿ ಫೈನಲ್‌ಗೇರಿತು. ಇದೇ ಸಂದರ್ಭ ಕಾಂಗ್ರೆಸ್ ಮುಖಂಡ ಡಾ. ಮಂಥರ್‌ಗೌಡ, ಗೌಡಳ್ಳಿ ಗ್ರಾ.ಪಂ. ಸದಸ್ಯ ಸಿ.ಈ. ವೆಂಕಟೇಶ್, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಪುಷ್ಪ ಸುರೇಶ್, ಮಮತ ಅಶೋಕ್, ಐಗೂರು ಜೂನಿಯರ್ ಕಾಲೇಜು ಪ್ರಾಂಶುಪಾಲ ಹೆಚ್.ಕೆ. ಉಮೇಶ್, ದಾನಿಗಳಾದ ಅಶ್ವಥ್ ಅವರನ್ನು ಸನ್ಮಾನಿಸಲಾಯಿತು.

ಯೂತ್‌ಕ್ಲಬ್ ಅಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೌಡಳ್ಳಿ ಪ್ರವೀಣ್, ತಾಕೇರಿ ಅಮೃತ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.