ಕುಶಾಲನಗರ, ಏ. ೧: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಮೋತ್ಸವ ಅಂಗವಾಗಿ ೧೦ ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷ ಪೂಜೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಶ್ರೀರಾಮಪಟ್ಟಾಭಿಷೇಕ, ಸೀತಾಕಲ್ಯಾಣ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಥಬೀದಿಯಲ್ಲಿರುವ ಸಂಘದ ಕಚೆೆÃರಿಯಲ್ಲಿ ವೇ.ಬ್ರ.ಕೆ.ಕೆ.ಸುಬ್ಬುರಾಮು ಅವರ ನೇತೃತ್ವದಲ್ಲಿ ಪ್ರತಿದಿನ ಮಧ್ಯಾಹ್ನ, ಸಂಜೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯುತ್ತಿದೆ.

ಈ ಸಂದರ್ಭ ಸಂಘದ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಖಜಾಂಚಿ ಶ್ರೀದೇವಿ ವೆಂಕಟರಮಣ ರಾವ್, ಕಾರ್ಯದರ್ಶಿ ಅನಿಲ್ ಶೇಷಾದ್ರಿ, ರಾಮೋತ್ಸವ ಸಮಿತಿ ಅಧ್ಯಕ್ಷ ಬಿ.ಆರ್. ಶಶಿಧರ್, ಕಾರ್ಯದರ್ಶಿ ಸತೀಶ್, ಖಜಾಂಚಿ ಕೆ.ವಿ. ಉದಯ, ಪ್ರಮುಖರಾದ ಎಂ.ವಿ.ನಾರಾಯಣ, ಡಾ.ರಾಧಾಕೃಷ್ಣ, ರಮಾ ವಿಜಯೇಂದ್ರ, ಶರ್ಮಿಳ ಮಂಜುನಾಥ್, ದೀಪಿಕ ರಾಘವೇಂದ್ರ, ಸೀತಾಲಕ್ಷಿö್ಮ, ವಿಜಯಶ್ರೀ ಮತ್ತಿತರರು ರಾಮೋತ್ಸವ ಆಚರಣೆಯ ಪೂರ್ವ ಸಿದ್ಧತೆ ನಡೆಸಿದ್ದಾರೆ.