ಮಡಿಕೇರಿ, ಮಾ. ೩೧: ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮ ದೇವತೆ ಶ್ರೀ ಚಾಮುಂಡೇಶ್ವರಿ ದೇವರ ತೆರೆ ಮಹೋತ್ಸವ ಏಪ್ರಿಲ್ ೩, ೪, ೫ ರಂದು ನಡೆಯಲಿದೆ.
ಏ. ೩ ರಂದು ಕೊಟ್ಟಿ ಹಾಡುವುದು (ದೇವರ ಚರಿತ್ರೆ ಹಾಡುವುದು), ಏ. ೪ ರಂದು ಮಧ್ಯಾಹ್ನ ೩ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಅಂಬಲಕ್ಕೆ ತಂದು ಎತ್ತು ಏರಾಟವಾಗಿ ಮತ್ತು ಭಂಡಾರ ಸಮೇತವಾಗಿ ಬನಕ್ಕೆ ಹೋಗುವುದು ಅಲ್ಲಿ ಕುಟ್ಟಿಚಾತ ಮತ್ತು ಇತರ ದೈವಗಳ ನರ್ತನ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಹಾಗೂ ಇತರ ಕಾರ್ಯಕ್ರಮಗಳು ಇರುತ್ತವೆ. ತದನಂತರ ಅದೇ ದಿನ ಸಾಯಂಕಾಲ ದೇವರ ಭಂಡಾರ ಸಮೇತ ಅಂಬಲಕ್ಕೆ ತಂದು ರಾತ್ರಿ ೯ ಗಂಟೆಗೆ ಮೇಲೇರಿಗೆ ಬೆಂಕಿ ಹಾಕುವುದು. ತದನಂತರ ರಾತ್ರಿಯೆಲ್ಲ ದೈವತ ಕಾರ್ಯಗಳು ಇರುತ್ತದೆ. ಏ. ೫ ರಂದು ಬೆಳಗ್ಗಿನ ಜಾವ ಶ್ರೀ ವಿಷ್ಣುಮೂರ್ತಿ ತೆರೆ (ಕೋಲ) ಮೇಲೇರಿ ಬೀಳುವುದು. ನಂತರ ಮಧ್ಯಾಹ್ನ ಹನ್ನೊಂದು ಗಂಟೆಯ ನಂತರ ಶ್ರೀ ಚಾಮುಂಡೇಶ್ವರಿ ದೊಡ್ಡಮುಡಿ ತೆರೆ (ಕೋಲ) ನಡೆಯಲಿದೆ ಎಂದು ತಕ್ಕಮುಖ್ಯಸ್ಥರ ಪರವಾಗಿ ಎನ್.ಕೆ. ಕುಂಞÂರಾಮ ಅವರು ತಿಳಿಸಿದ್ದಾರೆ.