ಪೊನ್ನಂಪೇಟೆ, ಮಾ. ೩೧: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ೧೯೭೯ನೇ ಸಾಲಿನ ಬಿಎ ವಿಭಾಗದ ವಿದ್ಯಾರ್ಥಿಗಳ ೩ನೇ ವರ್ಷದ ಸ್ನೇಹ ಸಮ್ಮಿಲನ ಸಂತೋಷಕೂಟ ಕಾರ್ಯಕ್ರಮ ಅತ್ತೂರಿನ ಖಾಸಿ ರೆಸಾರ್ಟ್ನಲ್ಲಿ ನಡೆಯಿತು. ತಾತಂಡ ಗೀತಾ, ಪಳಂಗAಡ ವಾಣಿ ಚಂಗಪ್ಪ, ಮೇಕೆರಿರ ಇಂದಿರಾ ಹಾಗೂ ಅರಮಣಮಡ ವಿಜಯಲಕ್ಷಿö್ಮ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮೃತಪಟ್ಟ ಸದಸ್ಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಲೇಜು ದಿನಗಳ ಸಹಪಾಠಿಗಳನ್ನು ಕಂಡು ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಖುಷಿಪಟ್ಟರು. ಸದಸ್ಯರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊAಡರು. ಈ ಸಂದರ್ಭ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ಕುರ್ಚಿಯಲ್ಲಿ ಪಳಂಗAಡ ವಾಣಿ ಚಂಗಪ್ಪ ಪ್ರಥಮ, ಮಾಂಗೇರ ಬೋಪಣ್ಣ ದ್ವಿತೀಯ, ತೀತಿರ ಬಾನು ತೃತೀಯ ಸ್ಥಾನ ಪಡೆದುಕೊಂಡರು. ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ತೀತಿರ ಬಾನು ಪ್ರಥಮ, ಕಿರುಂದAಡ ಲೀಲಾವತಿ ದ್ವಿತೀಯ, ಚೋನಿರ ದಿನಕರ್ ತೃತೀಯ ಸ್ಥಾನ ಪಡೆದುಕೊಂಡರು.
ಮಿಸ್ಸಿAಗ್ ದ ನಂಬರ್ ಗೇಮ್‌ನಲ್ಲಿ ಕಂಜಿತAಡ ಚಂಗಪ್ಪ ಪ್ರಥಮ, ತೀತಿರ ಬಾನು ದ್ವಿತೀಯ, ಪಳಂಗAಡ ವಾಣಿ ಚಂಗಪ್ಪ ತೃತೀಯ, ಪಾಸಿಂಗ್ ದ ಬಾಲ್‌ನಲ್ಲಿ ಚಿರಿಯಪಂಡ ಲೋಹಿತ್ ಪ್ರಥಮ, ತೀತಿರ ಬಾನು ದ್ವಿತೀಯ, ಮುಂಡುಮಡ ರಮೇಶ್ ತೃತೀಯ, ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಪಳಂಗAಡ ವಾಣಿ ಚಂಗಪ್ಪ ಪ್ರಥಮ, ಮಲ್ಲೇಂಗಡ ಮಧು ಕುಶಾಲಪ್ಪ ದ್ವಿತೀಯ, ಬಲ್ಲಚಂಡ ಮೀರ ಸಾಗರ್ ತೃತೀಯ ಸ್ಥಾನ ಪಡೆದುಕೊಂಡರು.
ಕಳ್ಳಿಚAಡ ವಿಜು ಕಾವೇರಮ್ಮ ಸ್ವರಚಿರ ಕವನ ವಾಚಿಸಿದರು. ಕೊಟ್ರಮಾಡ ಸಾವಿತ್ರಿ ಹಾಗೂ ಪಳಂಗAಡ ವಾಣಿ ಚಂಗಪ್ಪ ಚಲನಚಿತ್ರ ಗೀತೆ ಹಾಡಿದರು. ಮಲ್ಲೇಂಗಡ ಮಧು ಕುಶಾಲಪ್ಪ ಕ್ವಿಜ್ ನಡೆಸಿಕೊಟ್ಟರು. ವಾಣಿ ಚಂಗಪ್ಪ ಪ್ರಾರ್ಥಿಸಿ, ಮಣವಟ್ಟಿರ ಉತ್ತರ ಪೊನ್ನಣ್ಣ ಸ್ವಾಗತಿಸಿ, ಮಲ್ಲೇಂಗಡ ಮಧು ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.