ಮಡಿಕೇರಿ, ಮಾ. ೩೧: ಕಡಿಯತ್ತೂರಿನ ಕನ್ನಂಬಾಡಿ ಮಾರಿಯಮ್ಮ ದೇವರ ಉತ್ಸವ ಏಪ್ರಿಲ್ ೪ ಮತ್ತು ೫ ರಂದು ನಡೆಯಲಿದೆ. ಏಪ್ರಿಲ್ ೪ ರಂದು ಬೆಳಿಗ್ಗೆ ೬.೫೦ಕ್ಕೆ ಗಣಪತಿ ಹೋಮ, ೧೨ ಗಂಟೆಗೆ ಮನೆಯಿಂದ ಭಂಡಾರ ತರುವುದು, ೨ ಗಂಟೆಗೆ ಮಹಾಪೂಜೆ ಹಾಗೂ ೩.೪೫ಕ್ಕೆ ಹರಕೆ ಒಪ್ಪಿಸುವುದು ನಡೆಯಲಿದೆ.

ಮಧ್ಯಾಹ್ನದ ಅನ್ನದಾನವನ್ನು ಮಚ್ಚಂಡ ದೇವಪ್ಪ (ಲಾಲು) ನೀಡಲಿದ್ದಾರೆ ಎಂದು ದೇವಾಲಯ ಸಮಿತಿಯ ಬಿ.ಸಿ. ಬೋಜಪ್ಪ ತಿಳಿಸಿದ್ದಾರೆ.