ಗುಡ್ಡೆಹೊಸೂರು, ಮಾ. ೩೦: ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ವಿಷ್ಣುಭವನದಲ್ಲಿ ವಿಷ್ಣುಮೂರ್ತಿ ಕೋಲ ಮತ್ತು ಉಪದೈವಗಳ ಕೋಲ (ಕಳಿಯಾಟ) ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸುಳ್ಯ ಸುತ್ತಮುತ್ತಲಿನ ಸಾವಿರಾರು ಮಂದಿ ದೈವಭಕ್ತರು ಪಾಲ್ಗೊಂಡಿದ್ದರು. ಕೊಡಗು ಜಿಲ್ಲೆಯಿಂದ ಅಧಿಕ ಮಂದಿ ಭಾಗವಹಿಸಿದ್ದರು.

ಶ್ರೀ ವಿಷ್ಣುಮೂರ್ತಿ, ಪಾಷಾಣಮೂರ್ತಿ, ರುದ್ರಚಾಮುಂಡಿ, ಗುಳಿಗ, ಪಂಜುರ್ಲಿ ಇನ್ನೂ ಹಲವು ಉಪದೈವಗಳ ಕೋಲ ನಡೆಯಿತು. ಮೂರು ದಿನಗಳು ರಾತ್ರಿ ೮ ಗಂಟೆಯಿAದ ನಿರಂತರ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಅಲ್ಲಿನ ವಿಷ್ಣುಭವನದಲ್ಲಿ ತುಲಾಭಾರ ಸೇವೆ ನಡೆಯಿತು.

- ಗಣೇಶ್ ಕುಡೆಕ್ಕಲ್.