ಸಿದ್ದಾಪುರ, ಮಾ. ೩೦: ಅಕ್ರಮ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಬುಲ್ ಎಂಬಾತ ನೆಲ್ಯಹುದಿಕೇರಿಯ ಕಾವೇರಿ ಸೇತುವೆ ಬಳಿ ಅಕ್ರಮವಾಗಿ ಕೇರಳದ ಲಾಟರಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿದ್ದಾಪುರ ಪೊಲೀಸರು ಆರೋಪಿ ಯನ್ನು ಬಂಧಿಸಿ ೨೦೦೦ ರೂ ಮೌಲ್ಯದ ಲಾಟರಿಯನ್ನು ವಶಪಡಿಸಿ ಕೊಂಡಿದ್ದು ಕರ್ನಾಟಕ ಲಾಟರಿ ಅಂಡ್ ಪ್ರೆöÊಜ್ ಕಾಂಪಿಟೇಶನ್ ಟ್ಯಾಕ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.