ಮಡಿಕೇರಿ, ಮಾ. ೩೧ : ಇಲ್ಲಿನ ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ ೨೯ನೇ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ಶಿಬಿರದ ಉದ್ಘಾಟನೆ ತಾ. ೧ ರಂದು (ಇಂದು) ನಡೆಯಲಿದೆ.

ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂತರರಾಷ್ಟಿçÃಯ ಮಾಸ್ಟರ್ ಅಥ್ಲೆಟ್ ಮಾರಮಾಡ ಮಾಚಮ್ಮ ಉದ್ಘಾಟನೆ ಮಾಡುವರು. ವಾಂಡರ‍್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ರಾಷ್ಟಿçÃಯ, ಅಂತರರಾಷ್ಟಿçÃಯ ಹಿರಿಯ ಆಟಗಾರರು, ವಾಂಡರ‍್ಸ್ನ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.