ಸಿದ್ದಾಪುರ, ಮಾ. ೩೧: ಇತಿಹಾಸ ಪ್ರಸಿದ್ಧ ಕರಡಿಗೋಡು ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ಏಪ್ರಿಲ್ ೨ ರಿಂದ ೪ ರವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಏ. ೨ ರಂದು ನಿತ್ಯ ಪೂಜೆ, ಗೋ ಪೂಜೆ, ನಂತರ ೭.೩೦ಕ್ಕೆ ಭಂಡಾರ ತರುವುದು. ಏ. ೩ ರಂದು ೮.೩೦ಕ್ಕೆ ಗಣಪತಿ ಹೋಮ, ೧೦ ಗಂಟೆಗೆ ಕಲಶ ಪೂಜೆ, ೧೧ಗಂಟೆಗೆ ಗಂಗಾ ಸ್ನಾನ, ಶ್ರೀ ಕಾವೇರಿ ನದಿಯಿಂದ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ನಂತರ ತೀರ್ಥ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ೩.೩೦ಕ್ಕೆ ದೇವರ ಮನೆ-ಮನೆ ಮೆರವಣಿಗೆ, ೭ ಗಂಟೆಗೆ ಕೊಂಡ ಪೂಜೆ ನಡೆಯಲಿದೆ.
ಏ. ೪ ರಂದು ಬೆಳಿಗ್ಗೆ ೮ ಗಂಟೆಗೆ ರುದ್ರ ಪಾರಾಯಣ, ೧೦ ಗಂಟೆಗೆ ದೇವರ ಪ್ರಾರ್ಥನೆ, ಗಂಗಾಪೂಜೆ, ಗಂಗಾಸ್ನಾನ, ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾ ಪೂಜೆ, ಹರಕೆ ಒಪ್ಪಿಸುವುದು, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.