ಮಡಿಕೇರಿ, ಮಾ. ೨೯: ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಹೊರಬಿದ್ದ ಬೆನ್ನಲ್ಲೆ ಕೊಡಗು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಾಂತಿಯುತವಾಗಿ ಪ್ರಕ್ರಿಯೆ ನಡೆಸಲು ಪ್ರತಿಯೊಬ್ಬರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಮನವಿ ಮಾಡಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಪೊಲೀಸ್ ಇಲಾಖೆ ಕಣ್ಗಾವಲು - ಇಬ್ಬರ ಗಡಿಪಾರು

ಚುನಾವಣೆಯನ್ನು ಪಾರದರ್ಶಕ, ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.

ಸೂಕ್ಷö್ಮ, ಅತೀಸೂಕ್ಷö್ಮ, ಮತಗಟ್ಟೆಗಳನ್ನು ಗುರುತು ಮಾಡಲಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗುವ ಯಾವುದೇ ಸನ್ನಿವೇಶ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕುಶಾಲನಗರದ ನವೀನ್ ಕುಮಾರ್, ಸೋಮವಾರಪೇಟೆಯ ಅಜೀಂ ಬೇಗ್ ಅವರನ್ನು ಗಡಿಪಾರು ಮಾಡಲಾಗಿದೆ. ಗೂಂಡಾ ಕಾಯ್ದೆಗೆ ನಾಪಂಡ ಭೀಮಯ್ಯ ಅವರನ್ನು ಸೇರ್ಪಡೆ ಮಾಡಲಾಗಿದೆ. ಜೊತೆಗೆ ೬ ಮಂದಿ ಗಡಿಪಾರಿಗೆ ಪ್ರಸ್ತಾವನೆ ಇದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರಿ, ಸಾರ್ವಜನಿಕ ಹಾಗೂ ಖಾಸಗಿ ಜಾಗದಲ್ಲಿ ಅಳವಡಿಸಿರುವ ರಾಜಕೀಯ ಪ್ರೇರಿತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ೨೪ ಗಂಟೆಯೊಳಗೆ ಜನಪ್ರತಿನಿಧಿಗಳಿಗೆ, ಸರಕಾರಿ ಸಂಸ್ಥೆಗಳ ಪದಾಧಿಕಾರಿಗಳಿಗೆ ನೀಡಿರುವ ವಾಹನವನ್ನು ಹಿಂತೆಗೆದುಕೊಳ್ಳಲಾಗುವುದು, ಮೀಡಿಯಾ ಸೆಂಟರ್ ಸ್ಥಾಪಿಸುವ ಮೂಲಕ ಜಾಹೀರಾತು ಕುರಿತು ಮೇಲ್ವಿಚಾರಣೆ ಹಾಗೂ ಅನುಮತಿಗೆ ಕ್ರಮವಹಿಸಲಾಗುವುದು. ೭೨ ಗಂಟೆಯೊಳಗೆ ಅಭಿವೃದ್ಧಿ ಕಾಮಗಾರಿ ಸಂಬAಧ ನಡೆದ ಟೆಂಡರ್ ಪ್ರಕ್ರಿಯೆ, ಆದೇಶಗಳನ್ನು ರದ್ದುಗೊಳಿಸಲಾಗುವುದು ಎಂದು ವಿವರಿಸಿದರು.

ಅಧಿಕಾರಿಗಳ ತಂಡ

ಶಾAತಿಯುತವಾಗಿ ಯಶಸ್ವಿ ಚುನಾವಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ೨ ಕ್ಷೇತ್ರಕ್ಕೆ ತಲಾ ಓರ್ವ ಎಂಸಿಸಿ ನೋಡೆಲ್ ಅಧಿಕಾರಿ, ವೀರಾಜಪೇಟೆ ಕ್ಷೇತ್ರಕ್ಕೆ ೧೯, ಮಡಿಕೇರಿ ಕ್ಷೇತ್ರಕ್ಕೆ ೧೨ ಸೆಕ್ಟರ್ ಅಧಿಕಾರಿಗಳು, ಮಡಿಕೇರಿ ಕ್ಷೇತ್ರಕ್ಕೆ ೬, ವೀರಾಜಪೇಟೆ ಕ್ಷೇತ್ರಕ್ಕೆ ೮ ‘ಫ್ಲೆöÊಯಿಂಗ್ ಸ್ಕಾ÷್ವಡ್’ ಅಧಿಕಾರಿಗಳು, ಮಡಿಕೇರಿ ೧೮, ವೀರಾಜಪೇಟೆಗೆ ೨೪ ‘ಸ್ಟಾö್ಯಟಿಕ್ ಸರ್ವೇಲೆನ್ಸ್’ ಅಧಿಕಾರಿಗಳನ್ನು ನೇಮಿಸಲಾಗಿದೆ.

ಈ ತಂಡಗಳು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಆರಂಭಿಸಿವೆ. ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿಯೂ ಪ್ರತ್ಯೇಕ ತಂಡ ರಚಿಸಲಾಗಿದೆ. ಓರ್ವ ಅಭ್ಯರ್ಥಿ ರೂ. ೪೦ ಲಕ್ಷ ತನಕ ವೆಚ್ಚ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ೨ ಕ್ಷೇತ್ರಕ್ಕೆ ತಲಾ ಓರ್ವ ಸಹಾಯಕ ಖರ್ಚುವೆಚ್ಚ ಮೇಲ್ವಿಚಾರಕ, ತಲಾ ೧ ಅಕೌಂಟ್ ಟೀಂ, ತಲಾ ಇಬ್ಬರಂತೆ ಪ್ರಸಾದಕ್ಕೆ ಅವಕಾಶ, ದಾಸೋಹಕ್ಕೆ ನಿರ್ಬಂಧ

ಜಿಲ್ಲೆಯ ವಿವಿಧೆಡೆ ನಡೆಯುವ ಜಾತ್ರೆ, ಧಾರ್ಮಿಕ ಉತ್ಸವಗಳ ಆಯೋಜನೆಗೆ ಯಾವುದೇ ನಿರ್ಬಂಧವಿಲ್ಲ. ಅನುಮತಿ ಪಡೆದು ಕಾರ್ಯಕ್ರಮ ನಡೆಸಬಹುದು. ಆದರೆ, ದಾಸೋಹಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರಸಾದ ವಿತರಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪೂರ್ವ ನಿಗದಿತ ನಿಶ್ಚಿತಾರ್ಥ, ಮದುವೆ, ನಾಮಕರಣ ಇತ್ಯಾದಿ ಖಾಸಗಿ ಸಮಾರಂಭಗಳಿಗೆ ಯಾವುದೇ ತಡೆ ಇಲ್ಲ. ಆದರೆ, ಆ ಕಾರ್ಯಕ್ರಮಗಳು ರಾಜಕೀಯ ಪ್ರೇರಿತವಾಗಿರಬಾರದು. ಮೆರವಣಿಗೆ, ವಾರ್ಷಿಕೋತ್ಸವ, ಜಾತ್ರೆ, ಸಾಮೂಹಿಕ ವಿವಾಹ ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸಂಬAಧಿತ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ೨೪ ಗಂಟೆಯೊಳಗೆ ಸಂಬAಧ ಪಟ್ಟ ಇಲಾಖೆಗಳಿಂದ ಚುನಾವಣಾಧಿಕಾರಿಗಳು ನಿರಾಪೇಕ್ಷಣ ಪತ್ರ ನೀಡಲಿದ್ದಾರೆ ಎಂದು ಹೇಳಿದರು. ಪ್ರಸಾದಕ್ಕೆ ಅವಕಾಶ, ದಾಸೋಹಕ್ಕೆ ನಿರ್ಬಂಧ

ಜಿಲ್ಲೆಯ ವಿವಿಧೆಡೆ ನಡೆಯುವ ಜಾತ್ರೆ, ಧಾರ್ಮಿಕ ಉತ್ಸವಗಳ ಆಯೋಜನೆಗೆ ಯಾವುದೇ ನಿರ್ಬಂಧವಿಲ್ಲ. ಅನುಮತಿ ಪಡೆದು ಕಾರ್ಯಕ್ರಮ ನಡೆಸಬಹುದು. ಆದರೆ, ದಾಸೋಹಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರಸಾದ ವಿತರಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪೂರ್ವ ನಿಗದಿತ ನಿಶ್ಚಿತಾರ್ಥ, ಮದುವೆ, ನಾಮಕರಣ ಇತ್ಯಾದಿ ಖಾಸಗಿ ಸಮಾರಂಭಗಳಿಗೆ ಯಾವುದೇ ತಡೆ ಇಲ್ಲ. ಆದರೆ, ಆ ಕಾರ್ಯಕ್ರಮಗಳು ರಾಜಕೀಯ ಪ್ರೇರಿತವಾಗಿರಬಾರದು. ಮೆರವಣಿಗೆ, ವಾರ್ಷಿಕೋತ್ಸವ, ಜಾತ್ರೆ, ಸಾಮೂಹಿಕ ವಿವಾಹ ಇತ್ಯಾದಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಸಂಬAಧಿತ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ೨೪ ಗಂಟೆಯೊಳಗೆ ಸಂಬAಧ ಪಟ್ಟ ಇಲಾಖೆಗಳಿಂದ ಚುನಾವಣಾಧಿಕಾರಿಗಳು ನಿರಾಪೇಕ್ಷಣ ಪತ್ರ ನೀಡಲಿದ್ದಾರೆ ಎಂದು ಹೇಳಿದರು. ಹಣಕ್ಕೆ ಬೇಕು ಲೆಕ್ಕ

ನೀತಿ ಸಂಹಿತೆ ಜಾರಿ ಹಿನ್ನೆಲೆ ಯಾವುದೇ ವ್ಯಕ್ತಿಯೂ ರೂ. ೫೦ ಸಾವಿರ ಮೇಲ್ಪಟ್ಟು ತೆಗೆದುಕೊಂಡು ಹೋಗಲು ಪೂರಕ ದಾಖಲೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದರು.

ತಪಾಸಣೆ ವೇಳೆ ಹಣ ಪತ್ತೆಯಾದಲ್ಲಿ ಪೂರಕ ದಾಖಲೆ ಒದಗಿಸದಿದ್ದಲ್ಲಿ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ವಾಹನದಲ್ಲಿ ೧೦ ಲಕ್ಷಕ್ಕಿಂತ ಹೆಚ್ಚಿನ ಹಣ ಪತ್ತೆಯಾದಲ್ಲಿ ಆ ಮೊತ್ತವನ್ನು ಆದಾಯ ಇಲಾಖೆ ವಶಕ್ಕೆ ಪಡೆದುಕೊಳ್ಳಲಿದೆ. ವಾಹನಗಳಲ್ಲಿ ಅನುಮಾನಾಸ್ಪದ ಗೃಹೋಪಯೋಗಿ ವಸ್ತುಗಳು, ಮದ್ಯ, ಮಾದಕ ದ್ರವ್ಯ, ಆಯುಧ ಸಾಗಿಸಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ೧೫೧ ಹಾಡಿಯಲ್ಲಿ ವಾಸವಿರುವ ೧೦೦೨ ಮತದಾರರನ್ನು ನೂತನವಾಗಿ ಪಟ್ಟಿಗೆ ಸೇರಿಸಲಾಗಿದೆ. ಬಿಟ್ಟುಹೋಗಿದ್ದಲ್ಲಿ ಅವರನ್ನು ಸೇರಿಸುವ ಕೆಲಸ ಮಾಡಲಾಗುವುದು. ಜೊತೆಗೆ ಮಹಿಳೆಯರಿಗಾಗಿ ‘ಸಖಿ’ ಮತಗಟ್ಟೆ ಸ್ಥಾಪಿಸಲಾಗುವುದು. ಮತಗಟ್ಟೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ವೀಡಿಯೋ ಸರ್ವೇಲೆನ್ಸ್ ಅಧಿಕಾರಿಗಳು, ತಲಾ ಒಂದು ವೀಡಿಯೋ ವ್ಯೂವಿಂಗ್ ತಂಡ ಮಾಡಲಾಗಿದೆ ಎಂದರು.

ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಉಪವಿಭಾಗಧಿಕಾರಿ ಡಾ. ಯತೀಶ್ ಉಲ್ಲಾಳ, ಸಹಾಯಕ ಅಧಿಕಾರಿಗಳಾಗಿ ಮಡಿಕೇರಿ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ, ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್. ನರಗುಂದ, ಕುಶಾಲನಗರ ತಹಶೀಲ್ದಾರ್ ಟಿ.ಎಂ. ಪ್ರಕಾಶ್, ವೀರಾಜಪೇಟೆ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಜಂಟಿ ಕೃಷಿ ನಿರ್ದೇಶಕಿ ಶಭಾನ ಎಂ ಶೇಖ್, ಸಹಾಯಕ ಚುನಾವಣಾಧಿಕಾರಿಗಳಾಗಿ ವೀರಾಜಪೇಟೆ ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ, ಪೊನ್ನಂಪೇಟೆ ತಹಶೀಲ್ದಾರ್ ಎಸ್.ಎನ್. ಪ್ರಶಾಂತ್, ಮಡಿಕೇರಿ ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರುಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಮತದಾರರ ಸಹಾಯವಾಣಿ

ಚುನಾವಣೆಯ ಅಕ್ರಮಗಳ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಣಿ ಕುರಿತು, ಮತಗಟ್ಟೆ ಮಾಹಿತಿ ಪಡೆಯಲು ಸೇರಿದಂತೆ ಒಟ್ಟಾರೆಯಾಗಿ ಚುನಾವಣಾ ಸಂಬAಧಿತ ಮಾಹಿತಿ ಹಾಗೂ ದೂರು ನೀಡಬೇಕಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ ಫ್ರೀ ಸಂಖ್ಯೆ ೧೯೫೦ ಗೆ ಸಂಪರ್ಕಿಸಬಹುದಾಗಿದೆ. ಇದು ದಿನದ ೨೪ ಗಂಟೆ ಕೆಲಸ ಮಾಡಲಿದೆ. ಹೊರ ಜಿಲ್ಲೆಯಿಂದ ಕರೆ ಮಾಡುವವರು ೦೮೨೭೨-೧೯೫೦ಗೆ ಸಂಪರ್ಕಿಸುವAತೆ ಕೋರಿದರು.

ಭಾರತ ಚುನಾವಣಾ ಆಯೋಗ ಇ-vigiಟ (ಇ-ವಿಜಿಲ್) ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿಕೊಂಡು ಚುನಾವಣೆ ಯಲ್ಲಿ ಸಂಭವಿಸ ಬಹುದಾದ ಹಣ, ಮದ್ಯ ಆಮಿಷಗಳನ್ನು ತಡೆಯಬಹು ದಾಗಿದೆ. ಸಾರ್ವಜನಿಕರು ಈ ಆ್ಯಪ್ ಮೂಲಕ ವೀಡಿಯೋ, ಫೋಟೋ ನೀಡಿ ದೂರು ಸಲ್ಲಿಸಬಹುದಾಗಿದೆ ಎಂದರು.

‘ಕ್ಯೂ’ ಆ್ಯಪ್ ಅಭಿವೃದ್ಧಿ