ಮಡಿಕೇರಿ, ಮಾ. ೩೦: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರಗಳು ಹಾಗೂ ಯೂನಿಯನ್‌ನ ಸದಸ್ಯ ಸಂಘಗಳ ಕಾರ್ಯದರ್ಶಿಗಳಿಗೆ ಇತ್ತೀಚಿನ ಕಾಯ್ದೆ, ಕಾನೂನು ತಿದ್ದುಪಡಿ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಯೂನಿಯನ್‌ನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷರು ಹಾಗೂ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪರವರು, ಸಹಕಾರ ಸಂಘಗಳ ಕಾರ್ಯದರ್ಶಿ ಗಳಿಗೆ ಸಹಕಾರ ಕಾಯ್ದೆ, ಕಾನೂನಿನ ಅರಿವಿರಬೇಕು. ಕಾಲಕಾಲಕ್ಕೆ ಕಾಯ್ದೆ, ಕಾನೂನಿನಲ್ಲಿ ತಿದ್ದುಪಡಿ ಯಾಗುತ್ತಿರುವುದರಿಂದ ಇಂತಹ ಶಿಕ್ಷಣ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತವೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದ ಮೂಲಕವೇ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ಸಹಕಾರ ಸಚಿವಾಲಯ ವನ್ನು ಪ್ರಾರಂಭಿಸಿ ಅದರ ಮೂಲಕ ಏಕರೂಪದ ಕಾನೂನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರಲ್ಲದೆ ಸಹಕಾರ ದವಸ ಭಂಡಾರವು ಗ್ರಾಮಮಟ್ಟದಲ್ಲಿ ರುವುದರಿಂದ ಅವುಗಳು ಅಭಿವೃದ್ಧಿ ಹೊಂದಲು ಇತರೆ ಚಟುವಟಿಕೆ ಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಹಿಂದೆ ಆಹಾರ ಕ್ಷಾಮ ತಲೆದೋರಿದ ಸಂದರ್ಭದಲ್ಲಿ ದವಸ ಭಂಡಾರಗಳ ಮೂಲಕ ಆಹಾರದ ಕೊರತೆ ನೀಗಿಸಲು ಸಾಧ್ಯವಾಯಿತು. ಇಂದು ದವಸ ಭಂಡಾರಗಳು ತಮ್ಮ ಸೀಮಿತ ಕಾರ್ಯಚಟುವಟಿಕೆ ಯಿಂದಾಗಿ ಅವನತಿಯ ಹಾದಿಯಲ್ಲಿ ಸಾಗುತ್ತಿದೆ. ಅದಕ್ಕಾಗಿಯೆ ಯೂನಿಯನ್‌ನಿಂದ ಈ ಹಿಂದೆಯೆ ವಿವಿದೊದ್ಧೇಶ ಸಹಕಾರ ದವಸ ಭಂಡಾರವಾಗಿ ಪರಿವರ್ತಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದ್ದು ಅದರಂತೆ ಕೆಲವು ದವಸ ಭಂಡಾರ ಗಳು ಪ್ರಗತಿ ಸಾಧಿಸಿರುವುದರಿಂದ ಎಲ್ಲಾ ದವಸ ಭಂಡಾರಗಳು ತಮ್ಮ ಕಾರ್ಯಚಟುವಟಿಕೆಯನ್ನು ವಿಸ್ತರಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಅಂತೆಯೇ ಜಿಲ್ಲೆಯಲ್ಲಿ ಸಹಕಾರ ದವಸ ಭಂಡಾರಗಳು ಸ್ಥಾಪನೆಯಾಗಿ ೧೦೦ ವರ್ಷಗಳನ್ನು ಪೂರೈಸಿರುವುದು ಸಹಕಾರ ಕ್ಷೇತ್ರದಲ್ಲಿ ದವಸ ಭಂಡಾರಗಳ ಅಸ್ತಿತ್ವ, ಸ್ಥಾಪನೆಯ ಮಹತ್ವವನ್ನು ಕಾಣಬಹು ದಾಗಿದೆ. ನೆಲಜಿ, ಅರಪಟ್ಟು, ಕುಂಜಲಗೇರಿ, ಆವಂದೂರು ಇನ್ನೂ ಅನೇಕ ದವಸ ಭಂಡಾರಗಳು ಶತ ದಿನಗಳನ್ನು ಪೂರೈಸಿ ಪ್ರಸ್ತುತವು ಕಾರ್ಯನಿರ್ವಹಿಸುತ್ತಿವೆ ಎಂದರೆ ದವಸ ಭಂಡಾರಗಳಲ್ಲಿ ನಿಷ್ಪಕ್ಷಪಾತವಾಗಿ ದುಡಿಯುತ್ತಿರುವ ಆಡಳಿತ ಮಂಡಳಿ ಸದಸ್ಯರ ಪಾತ್ರ ಮಹತ್ತರ ವಾದದು. ದವಸ ಭಂಡಾರಗಳು ಇತರೆ ಕಾರ್ಯಚಟುವಟಿಕೆಯಾದ ಹಾಲಿನ ಶೇಖರಣೆ, ಸಂಗ್ರಹಣೆಯ ಕಾರ್ಯನಿರ್ವಹಿಸಲು ಅಂತೆಯೇ ಉತ್ಪಾದನೆಗೆ ಪ್ರೋತ್ಸಾಹಿಸಲು ಯೋಜನೆ ರೂಪಿಸಿಕೊಳ್ಳುವಂತೆ ಹಾಗೂ ಸಾವಯವ ಗೊಬ್ಬರ, ಔಷಧಕ್ಕಾಗಿ ಬಳಸುವ ಗೋಮೂತ್ರ ಇತ್ಯಾದಿಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದರ ಮೂಲಕ ಸಂಘದ ಅಭಿವೃದ್ಧಿ ಸಾಧಿಸಲು ಕರೆ ನೀಡಿದರು.
ಸಹಕಾರ ಸಂಘಗಳ ನಿವೃತ್ತ ಹಿರಿಯ ಲೆಕ್ಕಪರಿಶೋಧಕರಾದ ಡಿ.ಎನ್. ಚಂದ್ರಶೇಖರ್‌ರವರು ಲೆಕ್ಕಪತ್ರ ನಿರ್ವಹಣೆ, ಲೆಕ್ಕಪರಿಶೋಧನೆ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶ್ಯಾಮಲಾ ಅವರು ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಯನ್ನು ಕಗ್ಗೋಡ್ಲು ಸಹಕಾರ ದವಸ ಭಂಡಾರದ ಕಾರ್ಯದರ್ಶಿ ಇಂದ್ರಕುಮಾರ್‌ರವರು, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಯೂನಿಯನ್‌ನ ವ್ಯವಸ್ಥಾಪಕಿ ಆರ್. ಮಂಜುಳ ನೆರವೇರಿಸಿದರು.