ಸುಂಟಿಕೊಪ್ಪ, ಮಾ. ೩೦: ಕಣ್ಣೂರಿನ ಋಷಿದೇವ್ ಪ್ರತಿಷ್ಠಾನದ ಮುಖ್ಯಸ್ಥ ಸದ್ಗುರು ಶ್ರೀ ನರೇಂದ್ರನ್ ಅವರ ಉಪಸ್ಥಿತಿಯಲ್ಲಿ ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದಲ್ಲಿ ಯಾಗ ಮತ್ತು ಹೋಮಗಳ ಪ್ರಾಮುಖ್ಯತೆ, ಮುಂದಿನ ಜನಾಂಗಕ್ಕೆ ನಮ್ಮ ಜವಬ್ಧಾರಿ ಏನು ಎಂಬುದರ ಕುರಿತು ಅಧ್ಯಾತ್ಮಿಕ ಸಮಾಲೋಚನೆ ನಡೆಯಿತು.

ಯಾಗ ಮತ್ತು ಹೋಮಗಳು ಹೇಗೆ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ ಎಂಬುದರ ಕುರಿತು ಆಮೇರಿಕದ ವಿಜ್ಞಾನಿ ಪ್ರಸ್ತುತ ಬೆಂಗಳೂರಿನಲ್ಲಿರುವ ಡಾ. ಕೃಷ್ಣ ಮಾದಪ್ಪ ಉಪನ್ಯಾಸ ನೀಡಿದರು. ಪಂಚಭೂತಗಳಿAದ ಈ ವಿಶ್ವ ಕಾರ್ಯಾಚರಿಸುತ್ತಿದೆ. ಭೂಮಿ ಮತ್ತು ನೀರಿನ ಅವಶ್ಯಕತೆಯನ್ನು ನಾವು ಅರಿಯಬೇಕಾಗಿದೆ. ವೇದ ಉಪನಿಷÀತ್ತುಗಳಲ್ಲಿ ಹೇಳಲಾದ ಸಮಚಿತ್ತ ಮತ್ತು ಸಮಭಾವದ ಬದುಕು ನಮ್ಮ ಮುಂದಿನ ಜನಾಂಗಕ್ಕೆ ನಾವು ಕಲಿಸಬೇಕಾಗಿದೆ ಎಂದು ಅವರು ವಿವರಿಸಿದರು.

“ಗುರುತ್ವಂ” ಎಂಬ ವಿಷಯದ ಮೇಲೆ ಬೆಂಗಳೂರಿನ ಅಧ್ಯಾತ್ಮಿಕ ಚಿಂತಕಿ ಶಾರದ ಶ್ರೀಧರ್ ಉಪನ್ಯಾಸ ನೀಡಿ ಜೀವನದಲ್ಲಿ ಗುರು, ದೇವರು ಹಾಗೂ ಸಾಧಕನ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತಾನೆ. ಜೀವನದ ಮೊದಲ ಐದು ವರ್ಷಗಳಲ್ಲಿ ತಾಯಿ, ನಂತರದ ೨-೩ ವರ್ಷಗಳು ತಂದೆ ಹಾಗೂ ಜೀವನದ ಉದ್ದಕ್ಕೂ ವಿವಿಧ ಹಂತಗಳಲ್ಲಿ ವಿವಿಧ ಗುರುಗಳು ನಮ್ಮ ಜೀವನವನ್ನು ರೂಪಿಸುತ್ತಾರೆ. ವೇದ, ಉಪನಿಷತ್ತುಗಳು, ಪದ್ಧತಿ ಪರಂಪರೆಗಳು, ನಮ್ಮ ಜೀವನದಲ್ಲಿ ಎಷ್ಟು ಅವಶ್ಯಕ ಎಂಬುದನ್ನು ಅವರು ವಿವರಿಸಿದರು.

“ಪ್ರತಿಯೊಂದು ಶಕ್ತಿಯ ಸ್ವರೂಪ” ಎಂಬ ವಿಷಯದ ಮೇಲೆ ಋಷಿದೇವ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಾಬು ಕೇಶವನ್ ಉಪನ್ಯಾಸ ನೀಡಿ ಮಹಾಭಾರತ, ರಾಮಾಯಾಣ ವೇದ ಮತ್ತು ಉಪನಿಷÀತ್ತುಗಳಲ್ಲಿ ಹೇಳಲಾದ ಮಹಾವಾಕ್ಯಗಳನ್ನು ಸಾಧನೆ ಮತ್ತು ಅನುಭವದ ಹಿನ್ನೆಲೆಯಲ್ಲಿ ನಮ್ಮದಾಗಿಸಿಕೊಂಡು, ಬದುಕಿನಲ್ಲಿ ಪರಬ್ರಹ್ಮವನ್ನು ಅರಿಯುವುದು ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ನರೇಂದ್ರನ್ ಜೀ ಅವರು ಯಜ್ಞ ಯಾಗಾದಿಗಳು ಜೀವನಕ್ಕೆ ಮಾತ್ರವಲ್ಲದೆ, ಪರಿಸರ ಬ್ರಹ್ಮಾಂಡದ ಮೇಲೆ ಯಾವ ರೀತಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂಬುದನ್ನು ವಿವರಿಸಿದರು.

ಸೀತಾ ಅಪ್ಪಯ್ಯ ಪ್ರಾರ್ಥಿಸಿ, ಸ್ವಾತಿ ಮಂದಣ್ಣ ಸ್ವಾಗತಿಸಿ, ಕಾರ್ಯಪ್ಪ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.