ರಾಹುಲ್ ಗಾಂಧಿಗೆ ಶಿಕ್ಷೆ ಪ್ರಶ್ನಿಸಿ ಶೀಘ್ರದಲ್ಲಿ ಮೇಲ್ಮನವಿ

ನವದೆಹಲಿ, ಮಾ. ೨೯: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಪಕ್ಷದ ಉನ್ನತ ಕಾನೂನು ಸಲಹೆಗಾರರು ಒಂದು ಅಥವಾ ಎರಡು ದಿನಗಳಲ್ಲಿ ಸೂರತ್ ಸೆಷನ್ಸ್ ನ್ಯಾಯಾಲಯದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ೨೦೧೯ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಉಪನಾಮದ ಕುರಿತು ಆಕ್ಷೇಪಾರ್ಹ ಮಾತುಗಳನ್ನು ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸ್ಫೋಟ ಪ್ರಕರಣ - ಆರೋಪಿಗಳ ಖುಲಾಸೆ

ಜೈಪುರ, ಮಾ. ೨೯: ೭೧ ಮಂದಿಯನ್ನು ಬಲಿ ಪಡೆದಿದ್ದ ೨೦೦೮ರ ಜೈಪುರ ಸರಣಿ ಸ್ಫೋಟ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ. ೨೦೧೯ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆರೋಪಿಗಳು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಅತ್ಯಂತ ಕಳಪೆ ತನಿಖೆ ನಡೆಸಿದ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ. ೨೦೦೮ ರ ಮೇ ೧೩ ರಂದು ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ಸುಮಾರು ೭೧ ಜನ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು ಮತ್ತು ೧೮೫ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದರು. ರಾಮಚಂದ್ರ ದೇವಸ್ಥಾನದ ಬಳಿ ಒಂದು ಜೀವಂತ ಬಾಂಬ್ ಸಹ ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕಿçಯ ದಳ ನಿಷ್ಕಿçಯಗೊಳಿಸಿತ್ತು. ಡಿಸೆಂಬರ್ ೨೦೧೯ ರಲ್ಲಿ, ವಿಶೇಷ ನ್ಯಾಯಾಲಯವು ಮೊಹಮ್ಮದ್ ಸೈಫ್, ಮೊಹಮ್ಮದ್ ಸಲ್ಮಾನ್, ಸೈಫುರ್ ಮತ್ತು ಮೊಹಮ್ಮದ್ ಸರ್ವರ್ ಅಜ್ಮಿ ಎಂಬ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು ಮತ್ತು ಇನ್ನೊಬ್ಬ ಆರೋಪಿ ಶಹಬಾಜ್ ಹುಸೇನ್ ಅವರನ್ನು ಖುಲಾಸೆಗೊಳಿಸಿತ್ತು.

೧ನೇ ಶತಮಾನದ ತೀರ್ಥಂಕರರ ಪ್ರತಿಮೆ ಪತ್ತೆ

ಹುಬ್ಬಳ್ಳಿ, ಮಾ. ೨೯: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ೧೧ನೇ ಶತಮಾನದ ಜೈನ ತೀರ್ಥಂಕರ ಶ್ರೀ ಪಾರ್ಶ್ವನಾಥರ ಮೂರ್ತಿ ಪತ್ತೆಯಾಗಿದೆ. ಹೆಬ್ಬಾಳ ಗ್ರಾಮದ ಜೈನ ಮಂದಿರದ ಬಳಿ ಅಡಿಪಾಯ ಕಾಮಗಾರಿ ನಡೆಯುತ್ತಿರುವಾಗ ಈ ಪ್ರತಿಮೆ ಪತ್ತೆಯಾಗಿದೆ. ತೀರ್ಥಂಕರರ ಪ್ರತಿಮೆಯ ನೋಡಲು ಭಕ್ತರು ಮತ್ತು ಇತಿಹಾಸಕಾರರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹೆಬ್ಬಾಳ ಗ್ರಾಮದಲ್ಲಿ ೧೮೦೦ ರ ದಶಕದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಜೈನ ದೇವಾಲಯವಿದೆ, ಅಲ್ಲಿ ಆದಿನಾಥ ತೀರ್ಥಂಕರರ ಪ್ರತಿಮೆ ಇದೆ. ಈ ಗ್ರಾಮವು ೧೦ನೇ ಶತಮಾನದಲ್ಲಿ ಪ್ರಮುಖ ಜೈನ ಕೇಂದ್ರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಅವರು ಈ ಪ್ರದೇಶದಲ್ಲಿ ಮತ್ತಷ್ಟು ಉತ್ಖನನಕ್ಕೆ ಒತ್ತಾಯಿಸುತ್ತಿದ್ದಾರೆ. ಗದಗದ ಇತಿಹಾಸ ತಜ್ಞ ಬಾಹುಬಲಿ ಹಂದೂರು ಹೇಳುವ ಪ್ರಕಾರ, ಹೆಬ್ಬಾಳದ ದೇವಸ್ಥಾನ ಪ್ರದೇಶದಲ್ಲಿ ೧೧ನೇ ಶತಮಾನದಷ್ಟು ಹಳೆಯದಾಗಿದ್ದು, ಎರಡನೇ ಬಾರಿ ಪ್ರತಿಮೆ ಪತ್ತೆಯಾಗಿದೆ. ಇದಕ್ಕೂ ಮೊದಲು, ೧೧ನೇ ಶತಮಾನದ ಮತ್ತೊಂದು ಪ್ರತಿಮೆಯು ಇಲ್ಲಿ ಸಿಕ್ಕಿತ್ತು, ಇದನ್ನು ಮಹಾರಾಷ್ಟçದ ಕೊಥಲಿಯಲ್ಲಿರುವ ಜೈನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಅಸ್ಸಾಂನ ೩ ಶಾಸಕರ ಅಮಾನತ್ತು

ಗುವಾಹಟಿ, ಮಾ. ೨೯: ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹಗೊಂಡಿರುವ ವಿಚಾರ ಅಸ್ಸಾಂನ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, ೩ ಶಾಸಕರು ಅಮಾನತುಗೊಂಡಿದ್ದಾರೆ. ರಾಹುಲ್ ಅನರ್ಹತೆಯ ವಿಚಾರವಾಗಿ ಚರ್ಚಿಸಲು ಅಸ್ಸಾಮ್‌ನ ವಿಧಾನಸಭೆಯಲ್ಲಿ ಕಾಂಗ್ರೆಸ್ ನಿರ್ಣಯ ಮಂಡಿಸಿತ್ತು. ಈ ವಿಚಾರವಾಗಿ ಗದ್ದಲ ಉಂಟಾದ ಪರಿಣಾಮ ಸ್ಪೀಕರ್ ಬಿಸ್ವಜಿತ್ ಡೈಮರಿ ಎರಡು ಬಾರಿ ಸದನದ ಕಲಾಪವನ್ನು ಮುಂದೂಡಿ, ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕಕನ್ನು ಅಮಾನತುಗೊಳಿಸಿದರು. ಪ್ರಶ್ನೋತ್ತರ ಕಲಾಪ ಆರಂಭದ ಬಳಿಕ ಡೈಮರಿ ವಿಪಕ್ಷ ನಾಯಕ ದೇಬಬ್ರತಾ ಸೈಕಿಯಾ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ವಿಪಕ್ಷ ನಾಯಕ ಮಂಡಿಸಿದ ನಿರ್ಣಯದ ಬಗ್ಗೆ ಸಿಎಂ ಬಿಸ್ವ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ನಾವು ನ್ಯಾಯಾಂಗದ ಬಗ್ಗೆ ಇಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಹಿಂದೆAದೂ ನಡೆಯದಿರುವ ಘಟನೆಯಾಗಿದೆ. ವಿಧಾನಸಭೆಯಲ್ಲಿ ಗದ್ದಲ ಉಂಟುಮಾಡಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಗದ್ದಲ ಉಂಟುಮಾಡಲು ಪ್ರಾರಂಭಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ೩ ಶಾಸಕರನ್ನು ಅಮಾನತುಗೊಳಿಸಿದರು.

ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ವಜಾ

ಮುಂಬೈ, ಮಾ. ೨೯: ೨೦೨೨ರಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ರಾಷ್ಟçಗೀತೆಗೆ ಅಗೌರವ ತೋರಿದ ಆರೋಪಕ್ಕೆ ಸಂಬAಧಿಸಿದAತೆ ದೂರನ್ನು ರದ್ದುಗೊಳಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಗೆ ಸಂಬAಧಿಸಿದAತೆ ಮಧ್ಯೆ ಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ಏಕಸದಸ್ಯ ಪೀಠವು, ಹೊಸದಾಗಿ ಪ್ರಕರಣದ ತನಿಖೆಗಾಗಿ ಮ್ಯಾಜಿಸ್ಟೆçÃಟ್ ನ್ಯಾಯಾಲಯಕ್ಕೆ ಸೂಚಿಸುವ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯನ್ನು ವಜಾ ಗೊಳಿಸಿತು. ಬ್ಯಾನರ್ಜಿ ಅವರು ತಮ್ಮ ಅರ್ಜಿಯಲ್ಲಿ, ಸೆಷನ್ಸ್ ನ್ಯಾಯಾ ಲಯವು ಸಮನ್ಸ್ ಅನ್ನು ರದ್ದುಗೊಳಿಸುವ ಮತ್ತು ಪ್ರಕರಣವನ್ನು ರವಾನಿಸುವ ಬದಲು ಪ್ರಕರಣಕ್ಕೆ ಸಂಬAಧಿಸಿದ ಸಂಪೂರ್ಣ ದೂರನ್ನು ರದ್ದುಗೊಳಿಸಬೇಕು ಎಂದು ಹೇಳಿದರು. ನ್ಯಾಯಮೂರ್ತಿ ಬೋರ್ಕರ್, ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಕಾನೂನಿಗೆ ವಿರುದ್ಧವಾದ ಕ್ರಮವಿದೆ. ಆದ್ದರಿಂದ, ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದರು. ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿನ ಸಾರ್ವಜನಿಕ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ಕುಳಿತೇ ರಾಷ್ಟçಗೀತೆ ಹಾಡಲು ಪ್ರಾರಂಭಿಸಿದರು ಮತ್ತು ನಂತರ ಎದ್ದು ನಿಂತರು. ಅಲ್ಲದೆ, ಎರಡು ಸಾಲುಗಳನ್ನು ಹಾಡಿ, ಮಧ್ಯೆಯೇ ಅಲ್ಲಿಂದ ನಿರ್ಗಮಿಸಿದರು ಎಂದು ಆರೋಪಿಸಿ ವಿವೇಕಾನಂದ ಗುಪ್ತಾ ಎಂಬುವವರು ಸಲ್ಲಿಸಿದ್ದ ದೂರಿನ ಮೇರೆಗೆ ಮ್ಯಾಜಿಸ್ಟೆçÃಟ್ ನ್ಯಾಯಾಲಯವು ೨೦೨೨ರ ಮಾರ್ಚ್ನಲ್ಲಿ ಬ್ಯಾನರ್ಜಿಗೆ ಸಮನ್ಸ್ ಜಾರಿ ಮಾಡಿತ್ತು.

ಮೊಹಮ್ಮದ್ ಫೈಜಲ್ ಅನರ್ಹತೆ ರದ್ದು

ನವದೆಹಲಿ, ಮಾ. ೨೯: ಲೋಕಸಭೆ ಸಚಿವಾಲಯ ಎನ್‌ಸಿಪಿ ನಾಯಕ ಮೊಹಮ್ಮದ್ ಫೈಜಲ್ ಅವರ ಸದಸ್ಯತ್ವದ ಅನರ್ಹತೆಯನ್ನು ರದ್ದುಗೊಳಿಸಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಮೊಹಮ್ಮದ್ ಫೈಜಲ್‌ಗೆ ೧೦ ವರ್ಷಗಳ ಶಿಕ್ಷೆಯಾಗಿದ್ದ ಹಿನ್ನೆಲೆ ಅವರನ್ನು ಜನವರಿ ತಿಂಗಳಲ್ಲಿ ಅನರ್ಹಗೊಳಿಸಲಾಗಿತ್ತು. ಫೈಜಲ್ ಲಕ್ಷದ್ವೀಪವನ್ನು ಪ್ರತಿನಿಧಿಸುತ್ತಿದ್ದು, ತಮಗೆ ೧೦ ವರ್ಷಗಳ ಶಿಕ್ಷೆ ಪ್ರಕಟಿಸಿರುವುದನ್ನು ಪ್ರಶ್ನಿಸಿ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಹಾಗೂ ಪ್ರಕಟವಾಗಿದ್ದ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿತ್ತು. ೨೫.೦೧.೨೦೨೩ ರಲ್ಲಿ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೊಹಮ್ಮದ್ ಫೈಜಲ್ ಅವರ ಅನರ್ಹತೆಯನ್ನು ಮುಂದಿನ ನ್ಯಾಯಾಂಗದ ಆದೇಶದವರೆಗೆ ರದ್ದುಗೊಳಿಸಲಾಗಿದೆ ಎಂದು ಲೋಕಸಭಾ ಕಾರ್ಯದರ್ಶಿಗಳು ಅಧಿಸೂಚನೆಯ ಮೂಲಕ ತಿಳಿಸಿದ್ದಾರೆ.