ಮಡಿಕೇರಿ, ಮಾ. ೨೮: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಕೊಡಗಿನ ಜಿ.ಎನ್. ಶ್ವೇತ ಅವರಿಗೆ ವಿಪ್ರ ಮಹಿಳಾ ರತ್ನ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದಿಂದ ಕೊಡಮಾಡುವ ಈ ಪ್ರಶಸ್ತಿಗೆ ಭಾಜನರಾದ ಶ್ವೇತಾ, ಮಡಿಕೇರಿಯ ನಾಗೇಂದ್ರ, ಚಂದ್ರಕಾAತ ದಂಪತಿ ಪುತ್ರಿ.