ಮಡಿಕೇರಿ, ಮಾ. ೨೮: ಕರ್ನಾಟಕ ಸರಕಾರವು ಮರದ ಹಕ್ಕಿಗೆ ಸಂಬAಧಿಸಿದAತೆ ಅನುಮತಿ ನೀಡುವಲ್ಲಿ ಅಡ್ಡಿಯಾಗಿದ್ದ ೨೦೧೬ರ ಸರಕಾರಿ ಆದೇಶವೊಂದರಲ್ಲಿರುವ ದೋಷವನ್ನು ಪರಿಗಣಿಸಿ, ಅದನ್ನು ತಿದ್ದುಪಡಿ ಮಾಡಲು ಒಪ್ಪಿಗೆ ನೀಡಿದೆ. ೨೦.೦೩.೨೦೨೩ ರಂದು ಆದೇಶ ಹೊರಡಿಸಿದ್ದು, ತಿದ್ದುಪಡಿಯ ಪ್ರಕಾರ ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನ ಮೇಲೆ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರುತ್ತದೆ. ಕಂದಾಯಕ್ಕೆ ಒಳಪಡಿಸುವ ಮೊದಲು ಜಮೀನಿನಲ್ಲಿ ಮರ ಬೆಳೆದಿದ್ದರೆ ಆಗ ಕೃಷಿಕ ಹಾಗೂ ಸರಕಾರ ಸಮ ಪ್ರಮಾಣದಲ್ಲಿ ಮರದ ಮೌಲ್ಯವನ್ನು ಹಂಚಿಕೊಳ್ಳತಕ್ಕದ್ದು ಎಂದು ಸ್ಪಷ್ಟಪಡಿಸಿದೆ ಎಂದು ವಿವಿಧ ಬೆಳೆಗಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಣ್ಣ ಬೆಳೆಗಾರರ ಸಂಘದ ಪ್ರಬಾರ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ, ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್, ನಿರ್ದೇಶಕ ನಂದಾ ಬೆಳ್ಯಪ್ಪ, ಸಿಪಿಎ ಕಾರ್ಯದರ್ಶಿ ಬೆಳ್ಳಿಯಪ್ಪ, ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕ ವಿಶ್ವನಾಥ್, ವಕೀಲ ಕೆ.ಆರ್. ವಿದ್ಯಾಧರ್ ಇವರುಗಳು ಈ ಬಗ್ಗೆ ವಿವರ ಮಾಹಿತಿ ನೀಡಿದರು.
ಎಂದು ಸ್ಪಷ್ಟಪಡಿಸಿದೆ ಎಂದು ವಿವಿಧ ಬೆಳೆಗಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಣ್ಣ ಬೆಳೆಗಾರರ ಸಂಘದ ಪ್ರಬಾರ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ, ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್, ನಿರ್ದೇಶಕ ನಂದಾ ಬೆಳ್ಯಪ್ಪ, ಸಿಪಿಎ ಕಾರ್ಯದರ್ಶಿ ಬೆಳ್ಳಿಯಪ್ಪ, ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕ ವಿಶ್ವನಾಥ್, ವಕೀಲ ಕೆ.ಆರ್. ವಿದ್ಯಾಧರ್ ಇವರುಗಳು ಈ ಬಗ್ಗೆ ವಿವರ ಮಾಹಿತಿ ನೀಡಿದರು.
(ಮೊದಲ ಪುಟದಿಂದ) ಕೊಡಗಿನ ಜಮ್ಮಾ ಬಾಣೆ ನಿಬಂಧನೆಯ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ನಂತರ ಅದರಲ್ಲಿ ಬೆಳೆಯುವ ಮರಗಳು ಅದು. ಆ ಜಮೀನಿನ ಸ್ವಾಧೀನದಾರನಿಗೆ ಸಲ್ಲುತ್ತದೆ ಎನ್ನುವುದನ್ನು ೧೯೭೫ ರಿಂದಲೇ ನಮ್ಮ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಹೇಳುತ್ತಾ ಬಂದಿವೆ. ೧೯೭೫ರ ಇ.ಜಿ. ವೈಟ್ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಕಂದಾಯಕ್ಕೆ ಒಳಪಟ್ಟ ಜಮೀನಿನಲ್ಲಿ ಬೆಳೆದಿರುವ ಮರದ ಮೇಲೆ ಜಾಗದ ಮಾಲೀಕನಿಗೆ ಇರುವ ಹಕ್ಕನ್ನು ಅತ್ಯಂತ ಸ್ಪಷ್ಟವಾಗಿ ವಿಶ್ಲೇಷಿಸಿದೆ. ತದನಂತರ ನಡೆದ ಹಲವಾರು ಪ್ರಕರಣಗಳಲ್ಲಿ ಸಹ ಉನ್ನತ ನ್ಯಾಯಾಲಯಗಳು, ಕಂದಾಯಕ್ಕೆ ಒಳಪಡಿಸಿರುವ ಜಮೀನಿನಲ್ಲಿ ಕಂದಾಯ ವಿಧಿಸಿದ ನಂತರ ಬೆಳೆದ ಮರಗಳ ಮೇಲೆ ಕೊಡಗಿನ ರೈತನಿಗೂ ಪರಿಪೂರ್ಣ ಮಾಲೀಕತ್ವ ಹಕ್ಕು ಮತ್ತು ಅಧಿಕಾರ ಇದೆ ಎನ್ನುವುದನ್ನು ಆಗಾಗ್ಗೆ ಹೇಳುತ್ತಾ ಬಂದಿವೆ. ನ್ಯಾಯಾಲಯಗಳ ವಿಶ್ಲೇಷಣೆಗಳ ಪ್ರಕಾರ ಯಾವುದೇ ಬಾಣೆ ಜಮೀನು ಕಂದಾಯಕ್ಕೆ ಒಳಪಡಿಸಿದ ನಂತರ ಪರಾಧೀನ ಜಮೀನಾಗಿ ಬದಲಾಗುತ್ತದೆ. ಅಂತಹ ಜಮೀನುಗಳಲ್ಲಿ ಕಂದಾಯಕ್ಕೆ ಒಳಪಡಿಸಿದ ದಿನದಿಂದ ನೈಸರ್ಗಿಕವಾಗಿ ಬೆಳೆದ ಮರಗಳ ಮೇಲೆ ಮತ್ತು ಕಡಿದಿರುವ ಮರಗಳ ಕಾಂಡದ ಚಿಗುರಿನಿಂದ ಬೆಳೆದ ಮರಗಳ ಮೇಲೆ ಸರಕಾರಕ್ಕೆ ಯಾವುದೇ ಹಕ್ಕು ಇರುವುದಿಲ್ಲ, ಜಮೀನಿನ ಸ್ವಾಧೀನದಾರನಿಗೆ ಮಾತ್ರ ಈ ಮಾಲೀಕತ್ವದ ಹಕ್ಕು ಇರುತ್ತದೆ.
ಹೀಗಿದ್ದೂ ಕೃಷಿಕನೊಬ್ಬ ತನ್ನ ಜಮೀನಿನಲ್ಲಿ ಬೆಳೆದ ಮರಗಳನ್ನು ಮಾರಾಟ ಮಾಡುವುದಕ್ಕಾಗಲಿ, ಕೃಷಿಗೆ ಅಡಚಣೆಯಾದ ಮರದ ಕೊಂಬೆಗಳನ್ನು ಕಡಿಯುವುದಕ್ಕಾಗÀಲಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಇಲಾಖೆಯು ಕಂದಾಯ ಇಲಾಖೆಗೆ ಕಡತವನ್ನು ಕಳುಹಿಸಿ ಮರದ ಹಕ್ಕಿನ ಬಗ್ಗೆ ಅಭಿಪ್ರಾಯವನ್ನು ಕೇಳುವುದು ಚಾಲ್ತಿಯಲ್ಲಿರುವ ಪದ್ಧತಿಯಾಗಿದೆ. ವಿವಿಧ ನ್ಯಾಯಾಲಯಗಳು ಮರದ ಮೇಲೆ ಮಾಲೀಕನಿಗೆ ಇರುವ ಹಕ್ಕಿನ ಬಗ್ಗೆ ನಿಖರವಾದ ಅಭಿಪ್ರಾಯಗಳನ್ನು ತಿಳಿಸಿದ್ದರೂ ಸಹ ಅವುಗಳನ್ನು ಪರಿಗಣಿಸದೆ, ‘ರೈತನಿಗೆ ಬಾಣೆ ಜಮೀನಿನ ಮೇಲೆ ಹಕ್ಕು ಇರುತ್ತದೆ, ಆದರೆ ಅದರಲ್ಲಿ ಬೆಳೆದಿರುವ ಮರಗಳ ಮೇಲೆ ಮಾಲೀಕತ್ವ ಇರುವುದಿಲ’್ಲ ಎಂಬ ಹಿಂಬರಹ ಕೊಡುವುದು ಅನೇಕ ಸಮಯದಿಂದ ನಡೆದು ಬಂದಿದೆ. ಅಂತಹ ಸಮಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡಿದರೂ, ಅರಣ್ಯ ಡಿಪೋಗೆ ಸಾಗಿಸಲಾದ ಮರಗಳ ಮೌಲ್ಯಗಳನ್ನು ಪಾವತಿಸಲು ಅರಣ್ಯ ಇಲಾಖೆ ನಿರಾಕರಿಸುತ್ತಾ ಬಂದಿದೆ. ಆಗ ಪರಾಧೀನ ಜಮೀನುಗಳ ಮಾಲೀಕರು ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆಹೋಗಿ ಮರಗಳ ಮೇಲಿನ ತಮ್ಮ ಹಕ್ಕನ್ನು ಪ್ರತಿಪಾದಿಸುವುದು ಅನಿವಾರ್ಯವಾಯಿತು. ಇಂತಹ ವೇಳೆಯಲ್ಲಿ ಮರದ ಮೌಲ್ಯವನ್ನು ಪಾವತಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿ, ಆಸ್ತಿಯ ಸ್ವಾಧೀನದಾರರಿಗೆ ಹಣವನ್ನು ಕೊಡಲು ಆದೇಶ ನೀಡಿರುವ ಹಲವು ಪ್ರಕರಣಗಳು ನಡೆದಿವೆ. ಜೊತೆಗೆ ಜಮೀನಿನ ಮಾಲೀಕನಿಗೆ ಬಡ್ಡಿ ಮತ್ತು ದಂಡವನ್ನು ಪಾವತಿಸಲು ಸಹ ಅರಣ್ಯ ಇಲಾಖೆಗೆ ಆದೇಶವನ್ನು ನೀಡಲಾಗಿರುತ್ತದೆ. ಇದರಿಂದ ಸರಕಾರವು ಅಧಿಕಾರಿಗಳ ನಿರ್ಲಕ್ಷö್ಯದ ಕಾರಣಕ್ಕಾಗಿ ಅಪಾರ ದಂಡವನ್ನು ತೆರಬೇಕಾಗಿ ಬಂದಿದೆ. ಈ ರೀತಿ ಪರಾಧೀನ ಜಮೀನಿನ ಸ್ವಾಧೀನದಾರನಿಗೆ ಮರದ ಮೇಲಿರುವ ಮಾಲೀಕತ್ವದ ಬಗ್ಗೆ ನ್ಯಾಯಾಲಯಗಳು ನಿಖರವಾಗಿ ಹೇಳುತ್ತಾ ಬಂದರೂ ಅದನ್ನು ಪರಿಗಣಿಸುವಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದರು.
೨೦೦೩ರಲ್ಲಿ ಕೊಡಗಿನಲ್ಲಿ ಮರದ ಹಕ್ಕಿನ ಬಗ್ಗೆ ತೀವ್ರತರದ ಹೋರಾಟಗಳು ನಡೆದವು. ದಿವಂಗತ ಎ.ಕೆ. ಸುಬ್ಬಯ್ಯ ಮತ್ತು ದಿವಂಗತ ಜೆ.ಎ. ಕರುಂಬಯ್ಯ ಇವರುಗಳ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಕೂರ್ಗ್ ಪ್ಲಾಂರ್ಸ್ ಅಸೋಸಿಯೇಶನ್ ಮತ್ತು ಕೊಡಗು ಸಣ್ಣ ಬೆಳೆಗಾರರ ಸಂಘದವರು ಈ ನಿಟ್ಟಿನಲ್ಲಿ ನಿರಂತರವಾಗಿ ಅನೇಕ ಅರ್ಜಿಗಳನ್ನು ಬರೆದುಕೊಂಡು ಮತ್ತು ಸರಕಾರದೊಂದಿಗೆ ಹಲವಾರು ಸಭೆಗಳನ್ನು ನಡೆಸಿ ರೈತಪರವಾದ ನಿರ್ದಿಷ್ಟ ನಿಲುವುಗಳನ್ನು ಸರಕಾರ ಹೊಂದಿ ಸೂಕ್ತವಾದ ಕಾನೂನುಗಳನ್ನು ಜಾರಿಗೊಳಿಸಬೇಕೆಂದು ಒತ್ತಡವನ್ನು ಹೇರಿದ್ದರು. ಆದರೂ ಒಂದು ತಾರ್ಕಿಕ ಅಂತ್ಯ ಸಿಕ್ಕಿರಲಿಲ್ಲ. ಈ ನಡುವೆ ಕೆಲವು ಬೆಳೆಗಾರರು ತಮ್ಮ ಸ್ವಂತ ಆಸಕ್ತಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ರಿಟ್ ಅರ್ಜಿಗಳನ್ನು ಸಲ್ಲಿಸಿ ತಮ್ಮ ಪರವಾಗಿ ಆದೇಶಗಳನ್ನು ಪಡೆದುಕೊಂಡಿದ್ದರು. ಈ ಕಷ್ಟದ ಪರಿಸ್ಥಿತಿಯನ್ನು ತಿಳಿಗೊಳಿಸಲು ದಿವಂಗತ ಬಿ.ಎನ್. ಮನುಶೆಣೈ, ಚೇರಂಡ ನಂದಾ ಸುಬ್ಬಯ್ಯ ಮತ್ತು ವಕೀಲರಾದ ಕೆ.ಆರ್. ವಿದ್ಯಾಧರ ಇವರುಗಳು ೨೦೨೧ರ ಆಗಸ್ಟ್ನಲ್ಲಿ ವರದಿಯೊಂದನ್ನು ತಯಾರಿಸಿ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರಕಾರಕ್ಕೆ ಕಳುಹಿಸಿಕೊಟ್ಟು ಈ ಬಗ್ಗೆ ಕರ್ನಾಟಕದ ಉನ್ನತ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು, ವಿಚಾರ ವಿನಿಮಯಗಳನ್ನು ನಡೆಸಿದ್ದರು, ಇದರ ಫಲವಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರವು ಮರದ ಹಕ್ಕಿನ ಬಗ್ಗೆ ಅನುಮತಿ ನೀಡುವಲ್ಲಿ ಅಡಚಣೆಯಾಗಿರುವ ೨೦೧೬ರ ಸರಕಾರಿ ಆದೇಶವೊಂದರಲ್ಲಿರುವ ದೋಷವನ್ನು ಪರಿಗಣಿಸಿ, ಅದನ್ನು ತಿದ್ದುಪಡಿ ಮಾಡಲು ಆದೇಶ ದಿನಾಂಕ ೨೦.೦೩.೨೦೨೩ನ್ನು ಹೊರಡಿಸಿ ಆ ಮೂಲಕ ಇಲಾಖಾ ಅಧಿಕಾರಿಗಳಿಗೆ ಇದ್ದ ಹಲವಾರು ಗೊಂದಲಗಳನ್ನು ನಿವಾರಿಸಲಾಗಿದೆ. ಮತ್ತು ಪರಾಧೀನ ಜಮೀನಿನ ಮಾಲೀಕತ್ವ ಹಾಗೂ ಅನುಭವದ ಬಗ್ಗೆ ಇರುವ ಹಲವು ಚರ್ಚೆಗಳಿಗೆ ತೆರೆ ಎಳೆದು ಜಮೀನಿನ ಸ್ವಾಧೀನದಾರನಿಗೆ ಇರುವ ಪರಿಪೂರ್ಣ ಮಾಲೀಕತ್ವ ಮತ್ತು ಅಧಿಕಾರವನ್ನು ದೃಢೀಕರಿಸಿದೆ. ತಿದ್ದುಪಡಿಯ ಮುಖ್ಯ ಅಂಶದ ಪ್ರಕಾರ ಪರಾಧೀನ ಜಮೀನನ್ನು ಕಂದಾಯಕ್ಕೆ ಒಳಪಡಿಸಿದ ದಿನದಿಂದ ಆ ಜಮೀನಿನ ಮೇಲೆ ಬೆಳೆದಿರುವ ಮರಗಳು ಆ ಜಮೀನಿನ ಮಾಲೀಕನಿಗೆ ಸೇರುತ್ತವೆ. ಜೊತೆಗೆ ಕಂದಾಯಕ್ಕೆ ಒಳಪಡಿಸುವ ಮೊದಲು ಜಮೀನಿನಲ್ಲಿ ಮರ ಬೆಳೆದು ನಿಂತಿದ್ದರೆ ಆಗ ಕೃಷಿಕ ಮತ್ತು ಸರಕಾರ ಸಮಪ್ರಮಾಣದಲ್ಲಿ ಮರದ ಮೌಲ್ಯವನ್ನು ಹಂಚಿಕೊಳ್ಳತಕ್ಕದ್ದು ಎಂಬುದನ್ನು ಆದೇಶದಲ್ಲಿ ತಿಳಿಸಲಾಗಿದ್ದು, ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಇಲಾಖೆ (ಅರಣ್ಯ-ಬಿ)ಯ ಸರಕಾರದ ಅಧೀನ ಕಾರ್ಯದರ್ಶಿ ಎಂ.ಎಸ್. ಲೀಲಾವತಿ ಆದೇಶ ಹೊರಡಿಸಿದ್ದಾರೆ.
ಈ ತಿದ್ದುಪಡಿಗೆ ಕಾರಣವಾದ ಕರ್ನಾಟಕ ಸರ್ಕಾರಕ್ಕೆ ಮತ್ತು ಸರಕಾರದ ಉನ್ನತ ಅಧಿಕಾರಿಗಳಿಗೆ, ಸರಕಾರದ ಜೊತೆ ವ್ಯವಹರಿಸಲು ನೆರವಾದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಇವರುಗಳು ಅಭಿನಂದನಾರ್ಹರು ಎಂದು ಅವರುಗಳು ಹೇಳಿದರು.