ಪೆರಾಜೆ, ಮಾ. ೨೮: ಒಂದು ತಿಂಗಳಕಾಲ ನಡೆಯುವ ನೂರೊಂದು ದೈವಗಳ ನೆಲೆಬೀಡಾಗಿರುವ ಇತಿಹಾಸ ಪ್ರಸಿದ್ಧ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ದೇವರ ಬಲಿ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕಲಶೋತ್ಸವ, ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಸಂಜೆ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು,ಮುಖ ತೋರಣ, ಶಿಸ್ತು ಅಳೆಯುವುದು, ಶ್ರೀ ದೇವರ ಭೂತಬಲಿ, ದೇವರ ನೃತ್ಯ ಬಲಿ ನಂತರ ಕಟ್ಟೆಪೂಜೆ ನಡೆಯಿತು. ದೇವರ ದರ್ಶನ ಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ದೈವಗಳ ಕೋಲಗಳು ನಡೆದವು.
ಈ ಸಂದರ್ಭ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ದೇವಸ್ಥಾನದ ಅರ್ಚಕರು, ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ದೇವತಕ್ಕ ರಾಮಕಜೆ ರಾಜಗೋಪಾಲ, ಮಾಜಿ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ನಾಗೇಶ್ ಕುಂದಲ್ಪಾಡಿ, ಸುರೇಶ್ ಪೆರುಮುಂಡ, ಲೋಕನಾಥ ಅಮೆಚೂರು, ಪದ್ಮಯ್ಯ ಮಾಸ್ತರ್, ಸೇರಿದಂತೆ ದೇವಸ್ಥಾನದ ಮಾಜಿ ಹಾಗೂ ಹಾಲಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.