ವೀರಾಜಪೇಟೆ, ಮಾ. ೨೮: ಇತ್ತೀಚಿನ ದಿನದಲ್ಲಿ ಮಹಿಳೆಯರು ಪುರಷರಷ್ಟೆ ಸರಿಸಮಾನರಾಗಿ ಎಲ್ಲಾ ಕ್ಷೇತ್ರದಲ್ಲಿಯು ಸಾಧನೆ ಮಾಡುತ್ತಿದ್ದಾರೆ ಎಂದು ವೀರಾಜಪೇಟೆ ಮಹಿಳಾ ಸಮಾಜದ ಅಧ್ಯಕೆÀ್ಷ ಪಟ್ರಪಂಡ ಗೀತಾ ಬೆಳ್ಯಪ್ಪ ಹೇಳಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ವೀರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ಮಹಿಳಾ ಸದಸ್ಯರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲೆಮರೆಯ ಕಾಯಿಯಂತಿರುವ ಮಹಿಳಾ ಪ್ರತಿಭಾವಂತರು ಮನೆಯಲ್ಲಿಯೇ ಕಾಲಕಳೆಯದೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಮುಂದಿನ ವರ್ಷ ಮಹಿಳಾ ದಿನಾಚರಣೆಗೆ ಹೆಚ್ಚು ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸ ಲಾಗುವುದು ಎಂದರು. ಈ ಹಿಂದೆ ಮಹಿಳಾ ಸಮಾಜದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ನಾಟೋಳಂಡ ಆಶಾ ಚಿಣ್ಣಪ್ಪ ಮತ್ತು ಮುಂಡ್ಯೋಳAಡ ಕುಸುಮ ಸೋಮಣ್ಣ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಯು.ಕೆ. ಪೊನ್ನಮ್ಮ, ಕಾರ್ಯದರ್ಶಿ ಬಿ.ಜಿ. ಪುಷ್ಪಲತ, ನಿರ್ದೇಶಕರುಗಳಾದ ಬಿ.ಆರ್. ಸಬೀತ, ಮೆಟಿಲ್ಡಾ ಲೋಬೊ, ಬಿ.ಎನ್. ಭಾರತಿ, ಪಿ.ಕೆ. ನೀಲಮ್ಮ, ಹೆಚ್.ಆರ್. ಪುಷ್ಪ ವಾಸು, ಪ್ರೇಮ ಮಂಜುನಾಥ್, ಬಿ. ಯಶೋಧ ಬಾಬು, ಪುಷ್ಪ ಐತಪ್ಪ ಉಪಸ್ಥಿತರಿದ್ದರು. ಹೆಚ್.ಆರ್. ಪುಷ್ಪ ಸ್ವಾಗತಿಸಿ, ಬಿ.ಎ. ಪುಷ್ಪಲತ ನಿರೂಪಿಸಿದರೆ, ಪ್ರೇಮ ವೆಂಕಟೇಶ್ ಪ್ರಾರ್ಥಿಸಿದರೆ, ಭಾರತಿ ವಂದಿಸಿದರು. ಇದಕ್ಕೂ ಮೊದಲು ಸದಸ್ಯರಿಗೆ ಸಮಾಜದ ಸಭಾಂಗಣದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.