ಮಡಿಕೇರಿ, ಮಾ. ೨೮ : ಹೊದ್ದೂರು ಪಾಲೆಮಾಡುವಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಂಬAಧಿಸಿದAತೆ ರಾಜ್ಯ ಕ್ರಿಕೆಟ್ ಸಂಸ್ಥೇ (ಕೆ.ಎನ್.ಸಿ.ಎ.)ಗೆ ನೀಡಬೇಕಾಗಿರುವ ೧೧.೭೦ ಎಕರೆ ಜಾಗದ ಅಧಿಕೃತ ಹಸ್ತಾಂತರ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ.

(ಮೊದಲ ಪುಟದಿಂದ) ಈ ಬಗ್ಗೆ ರಾಜ್ಯ ಉಚ್ಚನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತದ ಸೂಚನೆಯಂತೆ ಮಡಿಕೇರಿ ತಾಲೂಕು ತಹಶೀಲ್ದಾರ್ ಕಿರಣ್ ಸೇರಿದಂತೆ ಕಂದಾಯ ಇಲಾಖೆ, ಸರ್ವೆ ಇಲಾಖೆ, ಎ.ಡಿ.ಎಲ್.ಆರ್. ಮತ್ತಿತರ ಸುಮಾರು ೨೫ ಅಧಿಕಾರಿಗಳ ತಂಡ ಜಾಗದ ಸರ್ವೆ, ಗಡಿ ಗುರುತು ಮೂಲಕ ಕೆ.ಎಸ್.ಸಿ.ಗೆ ಅಧಿಕೃತವಾಗಿ ಜಾಗ ಹಸ್ತಾಂತರಿಸಲು ಮುಂದಾಗಿದ್ದಾರೆ.

ಈ ಜಾಗದ ಕುರಿತು ವಿವಾದವಿದ್ದ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ನ ಮೂಲಕ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಸಂಸ್ಥೆಗೆ ಕ್ರಿಕೆಟ್ ಸ್ಟೇಡಿಯಂಗೆ ನಿಗದಿ ಮಾಡಿರುವ ೧೧.೭೦ ಎಕರೆ ಜಾಗ ಹಾಗೂ ಇದರ ಒತ್ತಿನಲ್ಲಿ ಪರಿಶಿಷ್ಟ ಜಾತಿ - ಪಂಗಡಕ್ಕೆ ಎಂದು ಗುರುತಿಸಲಾಗಿರುವ ೧ ಎಕರೆ ಜಾಗವನ್ನು ಪ್ರತ್ಯೇಕವಾಗಿ ಗಡಿ ಗುರುತಿಸಲಾಗಿದೆ. ಬಳಿಕ ೧೧.೭೦ ಎಕರೆ ಜಾಗವನ್ನು ಕೆ.ಎಸ್.ಸಿ.ಎ.ಗೆ ಹಸ್ತಾಂತರ ಮಾಡಲಾಗಿದೆ. ಜಾಗ ಗುರುತು ಮಾಡಿ, ಸ್ಥಳ ಪ್ರತ್ಯೇಕಿಸಿದ ಬಳಿಕ ಕೆ.ಎಸ್.ಸಿ.ಎ. ಸಂಸ್ಥೆಯವರು ಸುತ್ತಲೂ ಜೆ.ಸಿ.ಬಿ. ಮೂಲಕ ಟ್ರಂಚ್ ನಿರ್ಮಿಸಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಸ್ಥಳದಲ್ಲಿ ೩೬೫೦ ಕೆಮರಾ ಅಳವಡಿಕೆಯೊಂದಿಗೆ ತಹಶೀಲ್ದಾರ್ ಕಿರಣ್, ಶಿರಸ್ತೆದಾರ ಗುರುರಾಜ್, ಎ.ಡಿ.ಎಲ್.ಅರ್. ವಿರೂಪಾಕ್ಷ ಸೇರಿದಂತೆ ಕಂದಾಯ ಇಲಾಖಾ ಸಿಬ್ಬಂದಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಕೆ.ಎಸ್.ಸಿ.ಎ.ಯ ಜಿಲ್ಲಾ ಸಂಯೋಜಕ ಚೇನಂಡ ಪ್ರಥ್ವಿ ದೇವಯ್ಯ ಹಾಗೂ ಇತರರು ಸ್ಥಳದಲ್ಲಿದ್ದರು.

ಈ ಸಂದರ್ಭ ಇದರ ವಿರುದ್ಧ ಹೋರಾಟ ನಡೆಸುತ್ತಿದ್ದ ಪಾಲೆಮಾಡುವಿನ ಪರಿಶಿಷ್ಟ ಜಾತಿ - ಪಂಗಡದ ಹಲವರು ಈ ಸ್ಥಳದಿಂದ ಅನತಿ ದೂರದಲ್ಲಿ ಪ್ರತಿಭಟನಾತ್ಮಕ ರೀತಿಯಲ್ಲಿ ಕುಳಿತಿದ್ದರಾದರೂ ಈ ಜಾಗದತ್ತ ಯಾರೂ ಪ್ರವೇಶಿಸಲಿಲ್ಲ ಎನ್ನಲಾಗಿದೆ.