ಗೋಣಿಕೊಪ್ಪ ವರದಿ, ಮಾ. ೨೮ : ಹಾತೂರು ಕೆ. ಬೈಗೋಡು ಗ್ರಾಮದಲ್ಲಿ ಕರುವೊಂದು ಹುಲಿಗೆ ಬಲಿಯಾಗಿರುವ ಘಟನೆ ಸಂಭವಿಸಿದೆ. ಪಿ.ಎಂ. ಉತ್ತಯ್ಯ ಅವರಿಗೆ ಸೇರಿದ ಕರುವಾಗಿದ್ದು, ಸೋಮವಾರ ತೋಟದಲ್ಲಿ ಕಳೇಬರ ಪತ್ತೆಯಾಗಿದೆ. ೫ ದಿನಗಳಿಂದ ಕರು ಕಾಣೆಯಾಗಿದ್ದು, ತೋಟದಲ್ಲಿ ಪತ್ತೆಯಾಗಿರುವ ಕಳೇಬರದ ಭಾಗಶಃ ಹುಲಿ ತಿಂದಿದೆ. ಈ ಬಗ್ಗೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.