ನಾಪೋಕ್ಲು, ಮಾ. ೨೬: ಸಮೀಪದ ಕೊಟ್ಟಮುಡಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೬.೨೫ ಕೊಟಿ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿ, ರಸ್ತೆ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಗಮನ ಹರಿಸಬೇಕು.
ಮಳೆಗಾಲದಲ್ಲಿ ನೀರು ನಿಲ್ಲದ ಹಾಗೆ ಎರಡು ಬದಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಜನರು ಸೌಹಾರ್ಧ ಯುತವಾಗಿ ಬಾಳುವಂತಹ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದರು. ಇದಕ್ಕೂ ಮುನ್ನ ಮೂರ್ನಾಡು ರಸ್ತೆಯ ಭೂಮಿಪೂಜೆಯನ್ನು ಅವರು ನೆರವೇರಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ, ಉಪಾಧ್ಯಕ್ಷೆ ಸರಸು, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಕೊಟ್ಟಮುಡಿ ಮೈದು, ಚುನಾಯಿತ ಪ್ರತಿನಿಧಿಗಳು, ಲೋಕೋಪಯೋಗಿ ಅಭಿಯಂತರ ಸತೀಶ್, ಸಿಬ್ಬಂದಿ ಮಣಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅಬ್ದುಲ್ಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.