ಮಡಿಕೇರಿ, ಮಾ. ೨೬: ಆಸ್ಟೆçÃಲಿಯಾದ ನ್ಯೂ ಸೌತ್ ವೇಲ್ಸ್ ಪ್ರಾಂತದ ಸಂಸತ್‌ಗೆ ಮೂಲತಃ ಕೊಡಗಿನ, ಬೆಂಗಳೂರಿನಲ್ಲಿ ಜನಿಸಿದ ಕಲಿಯಂಡ ಚರಿಷ್ಮಾ ಆಯ್ಕೆಯಾಗಿದ್ದಾರೆ.

೮೦ ಲಕ್ಷ ಜನಸಂಖ್ಯೆ ಇರುವ ನ್ಯೂ ಸೌತ್ ವೇಲ್ಸ್ ಸಂಸತ್‌ಗೆ ಇವರು ಲಿವರ್‌ಪೂಲ್‌ನಿಂದ ಆಯ್ಕೆಗೊಂಡಿದ್ದು, ಭಾರತೀಯ ಮೂಲದ ನಾಲ್ವರು ಸಂಸತ್ ಪ್ರವೇಶಿಸಿದ್ದಾರೆ.