ಗೋಣಿಕೊಪ್ಪ, ಮಾ. ೨೬: ಭಾರತ ದೇಶದಲ್ಲಿ ಸೈನಿಕರು ದೇಶಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಾರೊ ಅದೇ ರೀತಿ ಅರ್ಚಕರು ಸಹ ತಮ್ಮ ಅಧ್ಯಾತ್ಮಿಕ ಬಲದಿಂದ ದೇಶವನ್ನು ಮುನ್ನಡೆಸಲು ಪ್ರಯತ್ನ ಮಾಡುತ್ತಾರೆ. ಈ ಹಿನ್ನೆಲೆ ದೇಶಭಕ್ತಿ ಹಾಗೂ ಆತ್ಮಶಕ್ತಿ ಒಂದೇ ಆಗಿದೆ ಎಂದು ಮೇಜರ್ ಬಿ.ಎ. ನಂಜಪ್ಪ ಹೇಳಿದರು.

ಗೋಣಿಕೊಪ್ಪದ ಆರ್‌ಎಂಸಿ ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟç ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅನೇಕ ರಾಜ್ಯಗಳು ಭಾರತದಿಂದ ಹೊರಗೆ ಹೋಗುವ ಪ್ರಯತ್ನಗಳನ್ನು ಮಾಡುತ್ತಿವೆ. ಒಂದು ಕಾಲದಲ್ಲಿ ರಾಷ್ಟçಕ್ಕೆ ಅತಿ ಹೆಚ್ಚು ದೇಶಭಕ್ತರನ್ನು ನೀಡಿದ ಮತ್ತು ಅತ್ಯಂತ ಅಧ್ಯಾತ್ಮಿಕ ಪ್ರಗತಿಯನ್ನು ಕಂಡAತಹ ರಾಜ್ಯಗಳು ಇಂದು ಪ್ರತ್ಯೇಕತೆಯನ್ನು ಕೇಳುತ್ತಿವೆ. ಇದಕ್ಕೆ ಕಾರಣ ಭಾರತವನ್ನು ವಿಭಜಿಸಲು ಹೊರಗಿನಿಂದ ನಡೆಯುವ ಪಿತೂರಿ ಆಗಿದೆ. ಭಾರತವು ಅತ್ಯಂತ ಸಮೃದ್ಧ, ಸುಸಂಸ್ಕೃತ ಮತ್ತು ಬುದ್ಧಿವಂತರ ರಾಷ್ಟç. ಈ ರಾಷ್ಟದ ಪ್ರಜೆಗಳನ್ನು ಧಾರ್ಮಿಕವಾಗಿ ಮತ್ತು ಜಾತಿಗಳಾಗಿ ಒಡೆಯಲು ಮತ್ತು ಅವರ ಮಧ್ಯೆ ವೈಮನಸ್ಯವನ್ನು ತಂದು ದೇಶವನ್ನು ಅಭದ್ರಗೊಳಿಸಲು ಮತ್ತು ತನ್ಮೂಲಕ ಈ ಹಿಂದೂ ರಾಷ್ಟçವನ್ನು ನಾಶಪಡಿಸುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ಅರಿತು ಪ್ರತಿಯೊಬ್ಬರು ರಾಷ್ಟç ಮತ್ತು ಧರ್ಮ ರಕ್ಷಣೆಗೆ ಮುಂದಾಗುವ ಅವಶ್ಯಕತೆ ಇದೆ. ಅದಕ್ಕಾಗಿ ಪ್ರತಿಯೊಬ್ಬರೂ ಧರ್ಮಾಚರಣೆಯನ್ನು ಮಾಡಿ ನಮ್ಮ ಆತ್ಮಬಲವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ಶಿವರಾಮ್ ಮಾತನಾಡಿ,

(ಮೊದಲ ಪುಟದಿಂದ) ಹಿಂದೂ ರಾಷ್ಟçವೇ ವಿಶ್ವಕಲ್ಯಾಣದ ಅಡಿಪಾಯವಾಗಿದೆ. ಇಂದು ಭಾರತದಲ್ಲಿ ಧರ್ಮನಿರಪೇಕ್ಷತೆ ಕಂಡುಬರುತ್ತಿದೆ. ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಪ್ರತಿಯೊಬ್ಬ ಹಿಂದೂ ರಾಷ್ಟç -ಧರ್ಮದ ಕಾರ್ಯಕ್ಕಾಗಿ ಸಮಯವನ್ನು ನೀಡಬೇಕು. ಹಿಂದೂ ಜನಜಾಗೃತಿ ಸಮಿತಿಯು ರಾಷ್ಟç ಧರ್ಮರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದು ಜಾಗೃತ ಹಿಂದುಗಳು ಸಮಿತಿಯ ಉಪಕ್ರಮಗಳಲ್ಲಿ ಸಹಭಾಗಿಯಾಗಲು ಕರೆ ನೀಡಿದರು. ಈ ಸಭೆಯ ನಂತರ ಗೋಣಿಕೊಪ್ಪದಲ್ಲಿ ಧರ್ಮ ಶಿಕ್ಷಣ ವರ್ಗ ಮತ್ತು ರಾಷ್ಟಿçÃಯ ಹಿಂದೂ ಆಂದೋಲನಗಳನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.