ಚೆಯ್ಯಂಡಾಣೆ, ಮಾ. ೨೭: ಕೊಡಗು ಜಿಲ್ಲೆಯ ಅನಿವಾಸಿ ಸಂಘಟನೆಯಾದ ಗಲ್ಫ್ ರಾಷ್ಟçಗಳಲ್ಲಿ ಕಾರ್ಯಾಚರಿಸುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಶಾರ್ಜಾ ಶಾಖೆಗೆ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾರ್ಜಾದ ಅಲ್ ರಂಝಿಯಾ ಕೇಫಿಟೇರಿಯಾ ಸಭಾಂಗಣದಲ್ಲಿ ವೆಲ್ಫೇರ್ನ ಯುಎಇ ಅಧ್ಯಕ್ಷರಾದ ಉಸ್ಮಾನ್ ಹಾಜಿ ನಾಪೋಕ್ಲು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಇಸ್ಮಾಯಿಲ್ ಮೂರ್ನಾಡು ನೆರವೇರಿಸಿದರು.
ಈ ಸಂದರ್ಭ ಹಲವಾರು ಪ್ರಮುಖ ಚರ್ಚೆಗಳು ನಡೆದವು. ಮುಖ್ಯ ಅತಿಥಿಯಾಗಿ ವೆಲ್ಫೇರ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಹಾಗೂ ಸಲಹಾ ಸಮಿತಿಯ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಮತ್ತಿತರರು ಉಪಸ್ಥಿತರಿದ್ದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶುಕೂರ್ ನಾಪೋಕ್ಲು, ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಗುಂಡಿಕೆರೆ, ಕೋಶಾಧಿಕಾರಿಯಾಗಿ ರಝಾಕ್ ನಾಪೋಕ್ಲು, ಉಪಾಧ್ಯಕ್ಷರಾಗಿ ಅಬ್ದುಲ್ಲ ಬಲಮುರಿ, ಅಝೀಝ್ ಕೊಂಡAಗೇರಿ, ಸಹ ಕಾರ್ಯದರ್ಶಿ ರಫೀಕ್ ಕೊಟ್ಟಮುಡಿ, ನೌಶಾದ್ ಎಮ್ಮೆಮಾಡು, ಕಾರ್ಯಕಾರಿಣಿ ಸದಸ್ಯರಾಗಿ ಫೈಝಲ್ ಚೇರಂಬಾಣೆ, ಸೈದು ಗುಂಡಿಕೆರೆ, ಹಂಝ ಕಡಂಗ, ರಝಾಕ್ ಕೊಂಡAಗೇರಿ, ಮುನಾಫ್ ಕೊಳಕ್ಕೇರಿ, ಝುಬೈರ್ ಕೊಯಿನಾಡು ಅವರನ್ನು ಆಯ್ಕೆ ಮಾಡಲಾಯಿತು. ಕೊನೆಯಲ್ಲಿ ಯುಎಇ ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಕೆರೆ ವಂದಿಸಿದರು.