ಚೆಟ್ಟಳ್ಳಿ, ಮಾ. ೨೭: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಧಾರವಾಡದ ಲಕ್ಕಮ್ಮನ ಹಳ್ಳಿಯಲ್ಲಿರುವ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಸಾಹಿತ್ಯ ಕ್ಷೇತ್ರದಲ್ಲಿ ಉಳುವಂಗಡ ಕಾವೇರಿ ಉದಯ ಅವರು ತಮ್ಮ ಚಿಗುರೆಲೆಗಳು ಮಕ್ಕಳ ಕಾದಂಬರಿಗೆ ಮಕ್ಕಳ ಚಂದಿರ ಪುಸ್ತಕ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡರೆ, ಸಂಗೀತ ಕ್ಷೇತ್ರದಲ್ಲಿ ಕಿರಿಯ ಗಾಯಕ ಅನ್ವಿತ್‌ಕುಮಾರ್ ಬಾಲ ಗೌರವ ಪ್ರಶಸ್ತಿ ಪಡೆದುಕೊಂಡರು.