ಕುಶಾಲನಗರ, ಮಾ. ೨೪: ಶನಿವಾರಸಂತೆ ಹೋಬಳಿ ಮುಳ್ಳೂರು ಗ್ರಾಮದ ಎಸ್. ದರ್ಶ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಪ್ರೊ. ಎಂ. ಜಯಶಂಕರ್ ಅವರ ಮಾರ್ಗದರ್ಶನದಲ್ಲಿ ದರ್ಶ ಅವರು ಮಂಡಿಸಿದ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ನೀಡಲಾಗಿದೆ.
ತಾ. ೧೫ ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ ೪೧ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. ದರ್ಶ ಅವರು ಕುಶಾಲನಗರ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಸಿ. ಉದಯಕುಮಾರ್ ಅವರ ಪತ್ನಿ.