ಶನಿವಾರಸಂತೆ, ಮಾ. ೨೪: ಪಟ್ಟಣದ ಹೊಸೂರು ರಸ್ತೆ ಯಲ್ಲಿರುವ ಶ್ರೀ ಶನೇಶ್ವರಸ್ವಾಮಿ ದೇವಾಲಯದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶುಕ್ರವಾರ ಹಾಗೂ ಶನಿವಾರ ೨ ದಿನಗಳವರೆಗೆ ದೇವಾಲಯ ದಲ್ಲಿ ವಿಶೇಷ ಪೂಜಾ ಕೈಂಕರ್ಯ ಏರ್ಪಡಿಸಲಾಗಿತ್ತು. ಅರ್ಚಕರು ದುರ್ಗಾಪೂಜೆ, ಶ್ರೀ ಕುಮಾರ ಲಿಂಗೇಶ್ವರ ಪೂಜೆ, ನಾಗದೇವತೆ ಪೂಜೆ, ಶ್ರೀಹುಚ್ಚಮ್ಮ ತಾಯಿ ಪೂಜೆಯನ್ನು ನೆರವೇರಿಸಿದರು.

ಶನಿವಾರ ಬೆಳಿಗ್ಗೆ ಶನಿದೇವರ ಮೂರ್ತಿಯನ್ನು ಅಲಂಕರಿಸಿ ಗಂಗಾ ಸ್ನಾನಕ್ಕೆ ಮಂಗಳ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ದೇವಾಲಯದ ಮುಂಭಾಗ ಕೆಂಡೋತ್ಸವ ನಡೆಯಿತು. ರಾತ್ರಿ ‘ಶನಿ ಪ್ರಭಾವ’ ಮತ್ತು ‘ಶಕಟಾದ್ರಿ ಶನಿ’ ಎಂಬ ಹರಿಕಥೆ ಕಾರ್ಯಕ್ರಮ ನಡೆಯಿತು. ದೇವಾಲಯ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಹಾಜರಿದ್ದರು.