ನಾಪೋಕ್ಲು, ಮಾ. ೨೪: ನಾಪೋಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಆರನೇ ದಿನದ ಪಂದ್ಯಾಟದಲ್ಲಿ ತಾತಂಡ, ಕೊಂಗAಡ, ಚೌರೀರ, ಕಡೇಮಡ, ಕೊಕ್ಕಂಡ, ಎಳ್ತಂಡ, ಪೊನ್ನಚ್ಚೆಟ್ಟಿರ, ಪಾಲೆಯಂಡ, ಅಪ್ಪಂಡೆರAಡ, ಪೆಮ್ಮಂಡ, ಇಟ್ಟಿರ, ಮಲ್ಲಮಡ, ಮಂಡೇಡ, ಅಲ್ಲಂಡ, ಮುಕ್ಕಾಟಿರ (ಪುಲಿಕೋಟು), ಕೋಡಿರ, ಮೂಕಳೆರ, ಬಲ್ಲಚಂಡ, ಕಂಬೆಯAಡ, ಉದಿಯಂಡ, ಮುಕ್ಕಾಟಿರ (ಹರಿಹರ) ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.
ಮೈದಾನ ೧ರಲ್ಲಿ ತಾತಂಡ ಮತ್ತು ಮುಕ್ಕಾಟಿರ (ಕುಂಬಳದಾಳು) ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ತಾತಂಡ ತಂಡವು ಮುಕ್ಕಾಟಿರ ತಂಡವನ್ನು ೬-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಕೊಂಗAಡ ತಂಡವು ಕೇಟೋಳಿರ ತಂಡವನ್ನು ೩-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಚೌರೀರ (ಹೊದವಾಡ) ಮತ್ತು ಮಂದೆಯAಡ ತಂಡಗಳ ನಡುವೆ ನಡೆಯಬೇಕಾಗಿದ್ದ ಪಂದ್ಯವು ಮಂದೆಯAಡ ತಂಡದ ಗೈರುಹಾಜರಿನಿಂದ ಚೌರೀರÀ ಮುಂದಿನ ಸುತ್ತು ಪ್ರವೇಶಿಸಿತು. ಕಡೇಮಡ ತಂಡವು ಮೂಕಂಡ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೊಕ್ಕಂಡ ಮತ್ತು ಬಾಚಂಗಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಬಾಚಂಗಡ ತಂಡದ ಗೈರು ಹಾಜರಿನ ಕಾರಣ ಕೊಕ್ಕಂಡ ತಂಡವು ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡಿತು. ಎಳ್ತಂಡ ತಂಡವು ನಾಪನೆರವಂಡ ತಂಡವನ್ನು ೪-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಸುಳ್ಳಿಮಡ ಮತ್ತು ಪೊನ್ನಚ್ಚೆಟ್ಟಿರ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಸುಳ್ಳಿಮಡ ತಂಡದ ಗೈರು ಹಾಜರಿನ ಹಿನ್ನಲೆಯಲ್ಲಿ ಪೊನ್ನಚೆಟ್ಟಿರ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮೈದಾನ ೨ರಲ್ಲಿ ನಡೆದ ಪಾಲೆಯಂಡ ಮತ್ತು ತೆನ್ನಿರ ತಂಡಗಳ ನಡುವಿನ ಪಂದ್ಯದಲ್ಲಿ ಪಾಲೆಯಂಡ ತಂಡವು ತೆನ್ನಿರ ತಂಡವನ್ನು ೫-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಅಪ್ಪಂಡೆರAಡ ತಂಡವು ಚೊಟ್ಟೆರ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪೆಮ್ಮಂಡ ತಂಡವು ಬೊಳ್ಳೆರ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಕೇಚಮಾಡ ಮತ್ತು ಇಟ್ಟಿರ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಕೇಚಮಾಡ ತಂಡದ ಗೈರುಹಾಜರಿನ ಕಾರಣದಿಂದ ಇಟ್ಟಿರ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಮಲ್ಲಮಡ ತಂಡವು ನಾಟೋಳಂಡ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು. ಕಾಣತಂಡ ತಂಡದ ಗೈರುಹಾಜರಿನಿಂದ ಮಂಡೆಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಅಲ್ಲಂಡ ತಂಡವು ಮಂಡಿರ ತಂಡವನ್ನು ೪-೩ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಮೈದಾನ ೩ರಲ್ಲಿ ನಡೆದ ಮಾಳೇಟಿರ (ಕೆದಮುಳ್ಳೂರು) ಮತ್ತು ಮುಕ್ಕಾಟಿರ (ಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಮಾಳೇಟಿರ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಕೋಡಿರ ಮತ್ತು ಪಾಲಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೋಡಿರ ತಂಡವು ಪಾಲಚಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿದರೆ, ಮೂಕಳೆರ ಮತ್ತು ಕಾಯಪಂಡ ತಂಡಗಳ ನಡುವಿನ ಸೆಣಸಾಟದಲ್ಲಿ ಮೂಕಳೆರ ತಂಡವು ಕಾಯಪಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು. ಅಜ್ಜಿಕುಟ್ಟೀರ ಮತ್ತು ಬಲ್ಲಚಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಅಜ್ಜಿಕುಟ್ಟಿರ ಗೈರು ಹಾಜರಿನಿಂದ ಬಲ್ಲಚಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕಂಬೆಯAಡ ತಂಡವು ಪುಲ್ಲೇರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಉದಿಯಂಡ ಮತ್ತು ಕರ್ತಮಾಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಕರ್ತಮಾಡ ತಂಡದ ಗೈರು ಹಾಜರಿನ ಕಾರಣ ಉದಿಯಂಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮುಕ್ಕಾಟಿರ (ಹರಿಹರ) ಮತ್ತು ಮೂರ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂರ್ಕಂಡ ತಂಡದ ಗೈರು ಹಾಜರಿನ ಕಾರಣ ಮುಕ್ಕಾಟಿರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. -ಪಿ.ವಿ.ಪ್ರಭಾಕರ್‌ಹಾಕಿ ಉತ್ಸವದಲ್ಲಿ ತೆನ್ನಿರ ಕುಟುಂಬದ ಪರ ಒಂದೇ ಕುಟುಂಬದ ಮೂವರು ಆಡಿ ಗಮನ ಸೆಳೆದರು. ತೆನ್ನಿರ ಮೈನಾ ಅವರ ಪತ್ನಿ ಬಬಿತಾ ಹಾಗೂ ಮಗ ಶಾನ್ ಪೊನ್ನಪ್ಪ ಆಟವಾಡಿದರು.