ವೀರಾಜಪೇಟೆ, ಮಾ. ೨೪: ಪಂಜರಪೇಟೆಯ ಶ್ರೀ ಮುತ್ತಪ್ಪ ಸೇವಾ ಸಂಘದ ೭೭ನೇ ವರ್ಷದ ಕಲಶ ಮಹೋತ್ಸವ ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು.

ಶ್ರೀ ಮುತ್ತಪ್ಪ ವೆಳ್ಳಾಟಂ ಮತ್ತು ಕಳಸ ಮಹೋತ್ಸವನ್ನು ಚಂಡೆ ಮೇಳದೊಂದಿಗೆ ನಗರದ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಿ ತದನಂತರ ಮೀನುಪೇಟೆಯ ಮುತ್ತಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.ಎರಡು ದಿನಗಳು ರಾತ್ರಿ ಮತ್ತು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ನಗರದ ಸುತ್ತಮುತ್ತಲಿನ ಭಕ್ತರು ಆಗಮಿಸಿ ಶ್ರೀ ಮುತ್ತಪ್ಪ ವೆಳ್ಳಾಟಂನಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.