ಶನಿವಾರಸಂತೆ, ಮಾ. ೨೪: ಸಮೀಪದ ಕಾಜೂರು ಗ್ರಾಮದ ಅಂಗನವಾಡಿ ಕೇಂದ್ರದ ಹಿಂಭಾಗದ ಜಾಗದಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಟ್ರಾö್ಯಕ್ಟರ್ನಲ್ಲಿ ತುಂಬಿಸಿ ತಂದು ಸುರಿಯಲಾಗುತ್ತಿದೆ ಎಂದು ಪೋಷಕರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಸದ ರಾಶಿಯಿಂದ ಹರಡುತ್ತಿರುವ ದುರ್ವಾಸನೆ ಪುಟ್ಟ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆಗಾಗ್ಗೆ ಹಚ್ಚುವ ಬೆಂಕಿಯಿAದ ಹೊರಹೊಮ್ಮುವ ಹೊಗೆ ಪರಿಸರವನ್ನು ಮಾಲಿನ್ಯಗೊಳಿಸುತ್ತಿದೆ. ಆದ್ದರಿಂದ ಅಂಗನವಾಡಿ ಕೇಂದ್ರದ ಹಿಂಭಾಗ ಗ್ರಾಮಗಳ ಕಸವನ್ನು ತಂದು ಸುರಿಯದಂತೆ ಕ್ರಮ ಕೈಗೊಳ್ಳಲು ಪೋಷಕರಾದ ಹಸೇನ್, ರಜಾಕ್, ಬಾಲಚಂದ್ರ, ರಂಗಮ್ಮ, ಪ್ರಿಯಾ, ಕಲ್ಪನಾ, ಶಿಲ್ಪಾ, ರೂಪಾ, ರಾಧಾ, ರೇಷ್ಮಾ, ಸುನಂದಾ, ಇತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.