ಸೋಮವಾರಪೇಟೆ, ಮಾ. ೨೩: ರಾಜಸ್ಥಾನ್ನಲ್ಲಿ ತಾ. ೨೭ ರಿಂದ ೩೦ರ ವರೆಗೆ ನಡೆಯುವ ೪೫ ನೇ ರಾಷ್ಟಿçÃಯ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ಗೆ ಜಿಲ್ಲೆಯ ಯುವಕ ಆದಿತ್ಯ ಸಿ.ಎಸ್. ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಪ್ರಸ್ತುತ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದ ಸುರೇಶ್ ಚಿನ್ನಳ್ಳಿ ಹಾಗೂ ಸುಮಿತ್ರ ದಂಪತಿ ಪುತ್ರ.