ಸಿದ್ದಾಪುರ, ಮಾ. ೨೩: ೮ ತಿಂಗಳ ಮಗುವೊಂದು ಉಂಗುರ ನುಂಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ನಿವಾಸಿ ಮುನೀರ್ ಹಾಗೂ ಸುಮಯ ದಂಪತಿಯ ಮೂರನೆ ಪುತ್ರ ರಿಜ್ವಾನ್ ಬುಧವಾರ ರಾತ್ರಿ ಆಕಸ್ಮಿಕವಾಗಿ ಉಂಗುರ ನುಂಗಿದ್ದಾನೆ. ವಿಚಾರ ತಿಳಿದ ಪೋಷಕರು ತಕ್ಷಣ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಗುರುವಾರ ಮೃತಪಟ್ಟಿದೆ. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಸ್ತçಚಿಕಿತ್ಸೆ ಮೂಲಕ ನುಂಗಿದ್ದ ಸ್ಟೀಲ್ ಉಂಗುರವನ್ನು ಹೊರತೆಗೆಯಲಾಗಿದೆ.