ಗೋಣಿಕೊಪ್ಪಲು, ಮಾ. ೨೪: ಹಾಡಗಲೇ ಹುಲಿಯೊಂದು ನಾಗರಿಕರಿಗೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗೋಣಿಕೊಪ್ಪ ಸಮೀಪದ ಹಾತೂರು ಬಳಿಯ ಕೆ. ಅಪ್ಪಣ್ಣನವರ ಕಾಫಿ ತೋಟದಿಂದ ಸ್ಥಳೀಯ ಸ್ಮಶಾನದ ಕಡೆಗೆ ಹುಲಿಯು ದಾಟಿದ್ದು ಮುಖ್ಯ ರಸ್ತೆಯಲ್ಲಿ ಈ ದೃಶ್ಯ ಸಾರ್ವಜನಿಕರಿಗೆ ಗೋಚರಿಸಿದೆ. ಇದರಿಂದ ಭಯಗೊಂಡ ಗ್ರಾಮಸ್ಥರು ಸಾಮಾಜಿಕ ಜಾಲತಾಣದ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಗಾತ್ರದ ಹುಲಿಯು ಓಡಾಟ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಸಂಬAಧ ಪೊನ್ನಂಪೇಟೆಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾತೂರು ಗ್ರಾಮಕ್ಕೆ ತೆರಳಿ ಹುಲಿಯ ಸಂಚಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಯಾವುದೇ ಹೆಜ್ಜೆ ಗುರುತುಗಳು ಇಲಾಖೆಯ ಸಿಬ್ಬಂದಿಗಳಿಗೆ ಗೋಚರಿಸಿರುವುದಿಲ್ಲ.