ಮಡಿಕೇರಿ, ಮಾ. ೨೩: ಇಲ್ಲಿನ ಸುದರ್ಶನ ಬಡಾವಣೆಯಲ್ಲಿರುವ ಶ್ರೀ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಸಂಭ್ರಮ ಎರಡು ದಿನಗಳ ಕಾಲ ವಿಜೃಂಭಣೆಯಿAದ ನೆರವೇರಿತು.
ಉತ್ಸವದ ಅಂಗವಾಗಿ ನಿನ್ನೆಯಿಂದಲೇ ವಿವಿಧ ಪೂಜಾದಿ ಕಾರ್ಯಗಳು ನೆರವೇರಿದವು. ಇಂದು ಬೆಳಿಗ್ಗೆಯಿಂದ ಪೂಜಾ ಕಾರ್ಯಗಳೊಂದಿಗೆ ಮಧ್ಯಾಹ್ನ ಮಹಾಪೂಜೆ ನೆರವೇರಿತು. ಇದರೊಂದಿಗೆ ಕ್ಷೇತ್ರದ ಆವರಣದಲ್ಲಿರುವ ನಾಗಪ್ಪ ಹಾಗೂ ದೇವಿ ಚಾಮುಂಡೇಶ್ವರಿಗೂ ಪೂಜೆಯೊಂದಿಗೆ ಮಂಗಳಾರತಿ ಬೆಳಗಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳು, ಸದಸ್ಯರುಗಳು ಉತ್ಸವದ ಯಶಸ್ಸಿನಲ್ಲಿ ಭಾಗಿಯಾಗಿದ್ದರು.