ಮಡಿಕೇರಿ, ಮಾ. ೨೪: ಹುದಿಕೇರಿ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ತಾ. ೨೮ ರಿಂದ ತಾ. ೩೦ ರವರೆಗೆ ಶ್ರೀ ಮುತ್ತಪ್ಪನ್ ತಿರುವಪ್ಪನ್ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದೆ. ಇದರ ಅಂಗವಾಗಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ತಾ. ೨೮ ಹಾಗೂ ತಾ. ೨೯ ರಂದು ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ತಾ. ೩೦ ರಂದು ಬೆಳಿಗ್ಗೆ ೬.೩೮ಕ್ಕೆ ಗಣಹೋಮ, ಪ್ರತಿಷ್ಠಾ ಹೋಮ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ.