ಮಡಿಕೇರಿ, ಮಾ. ೨೩ : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಜನಾಂಗದ ನಡುವೆ ಕುಟುಂಬವಾರು ಆರನೇ ವರ್ಷದ ಗೌಡ ಫುಟ್ಬಾಲ್ ಕಪ್ ಪಂದ್ಯಾವಳಿ ಆಯೋಜಿಸಲಾಗಿದೆ. ಇದರೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗಾಗಿ ‘ಯೂನಿಟಿ ಕಪ್’ ಹೆಸರಿನಲ್ಲಿ ಸೌಹಾರ್ದ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಫುಟ್ಬಾಲ್ ಅಕಾಡೆಮಿ ಕಾರ್ಯದರ್ಶಿ ಇಟ್ಟಣಿಕೆ ನವನೀತ್; ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಗೌಡ ಫುಟ್ಬಾಲ್ ಕಪ್ ಎಲ್ಲರ ಸಹಕಾರದೊಂದಿಗೆ ಆರನೇ ವರ್ಷಕ್ಕೆ ಕಾಲಿರಿಸಿದೆ. ಈ ಬಾರಿ ಮೇ ೬ ರಿಂದ ೧೩ ರವರೆಗೆ ಮರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ೭+೩ ಮಂದಿಯನ್ನೊಳ ಗೊಂಡ ಗೌಡ ಕುಟುಂಬ ತಂಡಗಳು ಭಾಗವಹಿಸಲಿವೆ. ಈ ಹಿಂದೆ ೯೦ ತಂಡಗಳು ಭಾಗವಹಿಸಿದ್ದವು. ಈ ಬಾರಿ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ೫೦ ತಂಡಗಳು ಹೆಸರು ನೋಂದಾಯಿಸಿಕೊAಡಿರುವದಾಗಿ ತಿಳಿಸಿದರು. ಫುಟ್ಬಾಲ್ ಪಂದ್ಯಾವಳಿ ಆಯೋಜನೆ ಮಾಡಿದ ಬಳಿಕದಿಂದ ಉತ್ತಮ ಆಟಗಾರರು ಹೊರ ಹೊಮ್ಮುತ್ತಿದ್ದಾರೆ. ಇದು ಪಂದ್ಯಾವಳಿ ಆಯೋಜನೆ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಮೇ ೬ ರಿಂದ ೧೦ ರವರೆಗೆ ಪಂದ್ಯಾವಳಿ ನಡೆಯಲಿದ್ದು, ೧೩ ರಂದು ಅಂತಿಮ ಪಂದ್ಯಾಟ ನಡೆಯಲಿದೆ ಎಂದು ಹೇಳಿದರು.

‘ಯೂನಿಟಿ ಕಪ್’

ಫುಟ್ಬಾಲ್ ಪಂದ್ಯಾವಳಿಯೊAದಿಗೆ ಸುತ್ತ ಮುತ್ತಲ ಗ್ರಾಮಗಳಾದ ಮರಗೋಡು, ಕಟ್ಟೆಮಾಡು, ಹೊಸ್ಕೇರಿ ಹಾಗೂ ಕಟ್ಟೆಮಾಡು ಗ್ರಾಮಗಳಲ್ಲಿನ ಗೌಡ, ಕೊಡವ, ಐಮಂಡ, ಮೊಗೇರ, ಮುಸ್ಲಿಂ, ಪೂಜಾರಿ, ಮಲಯಾಳಿ ಹಾಗೂ ಪರಿಶಿಷ್ಟ ಕುಟುಂಬಗಳ ನಡುವೆ ಸೌಹಾರ್ದ ಪಂದ್ಯಾವಳಿ ಏರ್ಪಡಿಸಲಾಗಿದೆ. ನಾಲ್ಕು ಗ್ರಾಮದಲ್ಲಿರುವ ಆಯಾ ಸಮುದಾಯದ ಆಟಗಾರರು ಸೇರಿಕೊಂಡು ೭+೩ ಆಟಗಾರರನ್ನೊಳಗೊಂಡ ತಂಡವನ್ನು ರಚಿಸಿಕೊಂಡು ಆಡಬಹುದಾಗಿದೆ. ಈಗಾಗಲೇ ೧೦ ತಂಡಗಳು ಹೆಸರು ನೋಂದಾಯಿಸಿಕೊAಡಿರುವದಾಗಿ ನವನೀತ್ ತಿಳಿಸಿದರು.

ಪಂದ್ಯಾವಳಿಯು ಮೇ.೧೧ ಹಾಗು ೧೨ರಂದು ನಡೆಯಲಿದ್ದು, ೧೩ರಂದು ಅಂತಿಮ ಪಂದ್ಯಾವಳಿ ನಡೆಯಲಿದೆ. ಎರಡೂ ಪಂದ್ಯಾವಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ ೩೧ ಕೊನೆಯ ದಿನವಾಗಿದೆ. ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಕ್ಕೆ ರೂ. ೬೦ ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನಿಗೆ ರೂ. ೪೦ ಸಾವಿರ ಹಾಗೂ ಟ್ರೋಫಿ, ಮೂರು ಮತ್ತು ನಾಲ್ಕನೇ ಸ್ಥಾನಿಗಳಿಗೆ ತಲಾ ರೂ. ೧೦ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು. ಯೂನಿಟಿ ಕಪ್‌ನಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಥಮ ರೂ. ೨೫ ಸಾವಿರ, ದ್ವಿತೀಯ ರೂ. ೧೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದೆಂದು ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಲು ಹೆಸರು ನೋಂದಾವಣೆಗಾಗಿ ಪುನಿತ್ (೯೪೮೩೨೫೩೭೬೯), ಬೊಳ್ಳೂರು ರೋಶನ್ (೯೬೧೧೫೦೨೨೭೦), ಕಾಂಗೀರ ಮೋನಿಶ್ (೯೦೦೮೫೩೮೯೩೨) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಬಡುವಂಡ್ರ ದುಷ್ಯಂತ್, ಖಜಾಂಚಿ ಬಡುವಂಡ್ರ ಸುಜಯ್, ಸಹ ಕಾರ್ಯದರ್ಶಿ ಕೊಂಪುಳೀರ ಪುನಿತ್, ಸ್ಥಾಪಕ ಅಧ್ಯಕ್ಷ ಕಟ್ಟೆಮನೆ ರಾಕೇಶ್ ಇದ್ದರು.