ಸಿದ್ದಾಪುರ, ಮಾ. ೨೩: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ೨೦೨೨-೨೩ನೇ ಸಾಲಿನಲ್ಲಿ ನಡೆಸಿದ ಕಿರಿಯ ದರ್ಜೆಯ ಭರತನಾಟ್ಯ ಪರೀಕ್ಷೆಯಲ್ಲಿ ಸಮೃದ್ಧಿ ಎ.ವಿ. ಶೇಕಡ ೮೪.೭೫ ಅಂಕ ಪಡೆದು ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ.

ನೆಲ್ಲಿಹುದಿಕೇರಿ ನಿವಾಸಿ ಸಿದ್ದಾಪುರದ ಪತ್ರಕರ್ತ ವಾಸು ಎ.ಎನ್. ಮತ್ತು ವಿಶಾಲಾಕ್ಷಿ ದಂಪತಿ ಪುತ್ರಿಯಾಗಿದ್ದು, ಸಿದ್ದಾಪುರದ ಭಾರತೀಯ ನೃತ್ಯ ಕಲಾ ಶಾಲೆಯ ವಿದೂಷಿ ಜಲಜಾ ನಾಗರಾಜ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಇವರು ನೆಲ್ಲಿಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.