ವೀರಾಜಪೇಟೆ, ಮಾ. ೨೩: ತಾ. ೮ ರಂದು ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಬೇಕಾಗಿದ್ದ ಮಹಿಳಾ ದಿನಾಚರಣೆಯನ್ನು ಕಾರಣಾಂತರಗಳಿAದ ಮುಂದೂಡಲಾಗಿತ್ತು. ಇದೇ ಕಾರ್ಯಕ್ರಮವನ್ನು ತಾ. ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಕೊಡವ ಸಮಾಜದ ಆಡಳಿತ ಮಂಡಳಿ ನಿರ್ದೇಶಕಿ ಐನಂಡ ಝೀನಾ ಕಿರಣ್ ತಿಳಿಸಿದರು. ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಇರುವ ಪ್ರತಿಭೆಗಳನ್ನು ಹೊರತಂದು ಎಲ್ಲಾ ಮಹಿಳೆಯರನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮ ಝೀನಾ ಕಿರಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಮತ್ತು ಡಾ. ಬಾಚೀರ ಭವಾನಿ ಉತ್ತಯ್ಯ ಉಪಸ್ಥಿತರಿರುವರು. ಈ ಕಾರ್ಯಕ್ರಮದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಹಾಗೂ ಪೈಪೋಟಿ ಕಾರ್ಯಕ್ರಮಗಳು ನಡೆಯಲಿದ್ದು, ಮಹಿಳಾ ಬಾಂಧವರು ಭಾಗವಹಿಸಿ ಸಹಕರಿಸುವಂತೆ ಝೀನಾ ಕಿರಣ್ ವಿನಂತಿಸಿದರು.
ಗೋಷ್ಠಿಯಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪಿ. ಪ್ರಕಾಶ್ ಗಣಪತಿ ಹಾಗೂ ನಿರ್ದೇಶಕರಾದ ಮನೆಯಪಂಡ ಧನ್ಯ ದೇವಯ್ಯ, ನಿರ್ದೇಶಕಿಯರಾದ ಕುಟ್ಟಂಡ ರೀಟಾ ಚಿಣ್ಣಪ್ಪ, ಕೋಡಿಮಣಿಯಂಡ ಅಶ್ವಿನಿ ಗಣಪತಿ ಉಪಸ್ಥಿತರಿದ್ದರು.