ಕೂಡಿಗೆ, ಮಾ. ೨೩: ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಸಂಪ್ರದಾಯದAತೆ ರಥದ ಸಿದ್ಧತೆ ಕಾರ್ಯ ಭರದಿಂದ ನಡೆಯುತ್ತಿದೆ.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯದರ್ಶಿ ಶೇಷಾಚಲ, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ, ಗೌರವ ಅಧ್ಯಕ್ಷ ಇ.ಎಸ್. ಗಣೇಶ್, ನಿರ್ದೇಶಕರಾದ ಆರ್.ಆರ್. ಮಧು, ಶಿರಗಜೆ ನವೀನ, ಕಾರ್ತಿಕ, ಶಿವಕುಮಾರ್, ಪ್ರಭುದೇವ್, ರಮೇಶ್, ಪ್ರಶಾಂತ್, ಶ್ರೀನಿವಾಸ ಮಂಜುನಾಥ, ಪರಮೇಶ್ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.