ಸೋಮವಾರಪೇಟೆ, ಮಾ. ೨೪: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಕೆರೆಕೇರಿಯಲ್ಲಿ ಆಕಸ್ಮಿಕವಾಗಿ ಕಾಡ್ಗಿಚ್ಚು ಕಾಣಿಸಿಕೊಂಡು ಕಾಫಿತೋಟ ಸುಟ್ಟು ಭಸ್ಮವಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಕೆರೆಕೇರಿ ಗ್ರಾಮದ ಕೆ.ಬಿ. ಗಿರೀಶ್ ಹಾಗು ಕಮಲಮ್ಮ ಅವರುಗಳಿಗೆ ಸೇರಿದ ಕಾಫಿ ತೋಟ ಹಾಗೂ ಕೃಷಿ ಜಮೀನಿಗೆ ಬೆಂಕಿ ಆವರಿಸಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.

ಇAದು ಮಧ್ಯಾಹ್ನ ೨.೩೦ರ ಸುಮಾರಿಗೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಗಾಳಿಯ ತೀವ್ರತೆಯಿಂದಾಗಿ ಕೆಲವೇ ಸಮಯದಲ್ಲಿ ಬೆಂಕಿ ವ್ಯಾಪಕಗೊಂಡು ಕಾಫಿ, ಕರಿಮೆಣಸು, ಅಡಿಕೆ, ಕಿತ್ತಳೆ ಕೃಷಿ ಹಾನಿಗೀಡಾಗಿದೆ. ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿದ್ದು, ಅಷ್ಟರಲ್ಲಾಗಲೇ ಕಾಫಿ ತೋಟ ಸುಟ್ಟು ಕರಕಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕಾಳಜಿ ವಹಿಸಿ ಬಡ ಕೃಷಿಕರಿಗೆ ನಷ್ಟ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.