ಚೆಟ್ಟಳ್ಳಿ, ಮಾ. ೨೩: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನ ಕಿಕ್ ಸ್ಟಾರ್ಟ್ ಫುಟ್ಬಾಲ್ ತಂಡಕ್ಕೆ ಇದೇ ತಾ. ೨೬ರಂದು ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

೧೧ ರಿಂದ ೨೧ ವರ್ಷದೊಳಗಿನ ಫುಟ್ಬಾಲ್ ಆಟಗಾರರು ಹಾಗೂ ಮಹಿಳಾ ಆಟಗಾರ್ತಿಯರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಹಾಗೂ ಸಂಪೂರ್ಣ ಫುಟ್ಬಾಲ್ ಕಿಟ್ ನಲ್ಲಿ ಬೆಳಗ್ಗೆ ೮:೩೦ ಗಂಟೆಗೆ ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಹಾಜರಿರಬೇಕೆಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ೯೪೪೮೯೭೬೪೨೧ ಅಥವಾ ಕಾರ್ಯದರ್ಶಿ ನಾಗೇಶ್ (ಈಶ್ವರ್) ೯೪೮೧೦೫೮೨೫೬ ಅವರನ್ನು ಸಂಪರ್ಕಿಸಬಹುದು.