ಮಡಿಕೇರಿ, ಮಾ. ೨೩: ಕುಂಬಳದಾಳು-ಕುಯ್ಯAಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ತಾ. ೨೫ ರಂದು (ನಾಳೆ) ನಡೆಯಲಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ಎತ್ತ್ಪೋರಾಟ, ೨ ಗಂಟೆಗೆ ಭಂಡಾರ ಇಳಿಯುವುದು, ೩ ಗಂಟೆಗೆ ಮಹಾಪೂಜೆ, ರಾತ್ರಿ ೭ ಗಂಟೆಗೆ ಶ್ರೀ ಅಯ್ಯಪ್ಪ ದೇವರ ಕೋಲ ಜರುಗಲಿದೆಯೆಂದು ದೇವಸ್ಥಾನದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.