ಸೋಮವಾರಪೇಟೆ, ಮಾ. ೨೪: ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ತಾ. ೩೦ರಂದು ಶ್ರೀರಾಮ ನವಮಿ ಉತ್ಸವ ನಡೆಯಲಿದ್ದು, ಅದರ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಅಲಂಕಾರದೊAದಿಗೆ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್ ತಿಳಿಸಿದರು.
ತಾ. ೩೦ ರಂದು ದೇವಾಲಯದಲ್ಲಿ ಬೆಳಿಗ್ಗೆ ೬ ರಿಂದ ೮ ರವರೆಗೆ ವಿವಿಧ ಪೂಜೆಗಳು ನಡೆಯುವುದು. ಸಂಜೆ ೫ ಗಂಟೆಗೆ ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆ ಸಹಯೋಗದೊಂದಿಗೆ ದೇವಾಲಯದಲ್ಲಿ ದೀಪಾಲಂಕಾರ ನಡೆಯಲಿದೆ. ನಂತರ ದೇವಾಲಯದ ಉತ್ಸವ ಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.
ಹಬ್ಬದ ಪ್ರಯುಕ್ತ ಶ್ರೀ ಆಂಜನೇಯ ಮೂರ್ತಿಗೆ ೯ ದಿನಗಳ ಕಾಲ ವಿಶೇಷ ಪೂಜೆ ನಡೆಯುತ್ತಿದ್ದು, ಪ್ರತಿದಿನ ವಿಶೇಷ ಅಲಂಕಾರದೊAದಿಗೆ ಪೂಜಾ ಕಾರ್ಯ ನಡೆಯುತ್ತಿದೆ ಎಂದರು.