ನಾಪೋಕ್ಲು, ಮಾ. ೨೪: ಇಲ್ಲಿಗೆ ಸಮೀಪದ ಪಾಲೂರು ಶ್ರೀ ಪಂಚಮಾಲಿAಗೇಶ್ವರ ದೇವಾಲಯದಲ್ಲಿ ಯುಗಾದಿ ಪ್ರಯುಕ್ತ ವಿಶೇಷ ರುದ್ರಾಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿತ್ತು. ಮಹಾಪೂಜೆ ಬಳಿಕ ತೀರ್ಥ ಪ್ರಸಾದ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಪೂಜಾ ವಿಧಿ ವಿಧಾನವನ್ನು ಅರ್ಚಕರಾದ ದೇವಿ ಪ್ರಸಾದ್ ಮತ್ತು ಅರುಣ ನೆರವೇರಿಸಿಕೊಟ್ಟರು.