ಗೋಣಿಕೊಪ್ಪಲು, ಮಾ. ೨೩: ಪೊನ್ನಂಪೇಟೆ ಕಿರುಗೂರು ಪ್ರಮುಖ ರಸ್ತೆಯನ್ನು ಈ ಹಿಂದೆ ಅಭಿವೃದ್ಧಿ ಮಾಡಲಾಗಿತ್ತು. ಇದರ ಮುಂದುವರಿದ ರಸ್ತೆ ಕಾಮಗಾರಿಗೆ ಮೂರು ಕೋಟಿ ಅನುದಾನ ಮಂಜೂರಾಗಿದ್ದ ಕಾಮಗಾರಿಗೆ ಭೂಮಿಪೂಜೆಯನ್ನು ಕಿರುಗೂರು ಬಳಿ ಗ್ರಾಮಸ್ಥರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.
ಈ ವೇಳೆ ಮಾತನಾಡಿದ ಬೋಪಯ್ಯ, ಹಲವಾರು ಸಮಯ ದಿಂದ ರಸ್ತೆ ಅಗಲಿಕರಣವಾಗಿರಲಿಲ್ಲ. ಇದೀಗ ತೋಟ ಮಾಲೀಕರ ಸಹಕಾರದಿಂದ ರಸ್ತೆ ಅಗಲೀಕರಣ ವಾಗುತ್ತಿದೆ ಎಂದರು.
ಈಗಾಗಲೇ ಕಿರುಗೂರು - ಪೊನ್ನಪ್ಪಸಂತೆ ರಸ್ತೆಗೆ ರೂ. ೩ ಕೋಟಿ ನೀಡಲಾಗಿದೆ. ಕೆಲವು ಕಡೆ ಶೀತ ಪ್ರದೇಶವಿರುವುದರಿಂದ ಕಾಂಕ್ರಿಟ್ ರಸ್ತೆ ಮಾಡಲು ಅಧಿಕಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಲಾಗಿದೆ. ಕಿರುಗೂರು ಗ್ರಾ.ಪಂ. ಸದಸ್ಯ ಚೆಪ್ಪುಡೀರ ರಾಕೇಶ್ ದೇವಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಬಿಜೆಪಿ ಪ್ರಮುಖರಾದ ಅಚ್ಚಪಂಡ ಮಹೇಶ್, ಕವಿತ ಬೋಜಪ್ಪ, ಗುಮ್ಮಟೀರ ಕಿಲನ್ ಗಣಪತಿ, ಅಚ್ಚಪಂಡ ಮಹೇಶ್, ಮುದ್ದಿಯಡ ಮಂಜು ಸೇರಿದಂತೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು, ವಿವಿಕೆ ಸಮೂಹ ಸಂಸ್ಥೆಯ ಪ್ರಮುಖರು ಹಾಜರಿದ್ದರು.