ಮಡಿಕೇರಿ, ಮಾ. ೨೩: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರಾಗಿ ಕೊಲ್ಯದ ಗಿರೀಶ್ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಸಂಯೋಜಕರಾಗಿ ಜಿ.ಎಂ. ಕಾಂತರಾಜು ಅವರನ್ನು ನೇಮಿಸಲಾಗಿದೆ. ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್‌ನ ಸಹ ಸಂಯೋಜಕರಾಗಿ ಈ ಕೆಳಕಂಡವರನ್ನು ನೇಮಿಸಲಾಗಿದೆ.

ಮತ್ರಂಡ ದಿಲ್ಲು (ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್), ಹನೀಫ್ ಪಿ.ಎ. (ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್), ಬೊಳ್ಳಂಡ ಗಿರೀಶ್ (ಶರಿ) (ನಾಪೋಕ್ಲು ಬ್ಲಾಕ್ ಕಾಂಗ್ರೆಸ್), ಪ್ರಕಾಶ್ ಆಚಾರ್ಯ (ಮಡಿಕೇರಿ ಬ್ಲಾಕ್ ಕಾಂಗ್ರೆಸ್) ಪಿ.ಎಂ. ಲತೀಫ್, (ಕುಶಾಲನಗರ ಬ್ಲಾಕ್ ಕಾಂಗ್ರೆಸ್) ಹಾಗೂ ಜನಾರ್ಧನ ಜಿ.ಎಲ್. (ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್) ಅವರುಗಳನ್ನು ನೇಮಿಸಲಾಗಿದೆ.