ಸಿದ್ದಾಪುರ, ಮಾ ೨೩: ಸಿದ್ದಾಪುರದ ಗುಹ್ಯ ಗ್ರಾಮದ ಹೈಸ್ಕೂಲ್ ಪೈಸಾರಿ ಶ್ರೀ ಭದ್ರಕಾಳಿ ದೇವಾಲಯದ ೩೪ನೇ ವಾರ್ಷಿ ಕೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ತೆರೆ ಮಹೋತ್ಸವ ತಾ. ೨೪ ರಿಂದ (ಇಂದಿನಿAದ) ತಾ. ೨೬ ರವರೆಗೆ ನಡೆಯಲಿದೆ.

ತಾ. ೨೪ ರಂದು (ಇಂದು) ಸಂಜೆ ಅಶ್ವಥೀ ಪೂಜೆಯೊಂದಿಗೆ ಉತ್ಸವ ಕಾರ್ಯಕ್ರಮ ಪ್ರಾರಂಭ ವಾಗಲಿದೆ. ಸಂಜೆ ೫.೩೦ಕ್ಕೆ ದೇವಾ ಲಯದ ಆವರಣದಲ್ಲಿ ನಾರಿಯ ರಿಂದ ಕರಿ ಚಾಮುಂಡಿ ದೇವಿಗೆ ಪೊಂಗಲ್ ನೈವೇದ್ಯ ಸಮರ್ಪಣೆ, ನಂತರ ದೇವಾಲಯದಲ್ಲಿ ೫೦೧ ದೀಪ ಬೆಳಗಿಸಲಾಗುವುದು.

ತಾ. ೨೫ ರಂದು ಬೆಳಗ್ಗಿನ ಜಾವ ೫ ಗಂಟೆಯಿAದ ಶ್ರೀ ಭದ್ರಕಾಳಿ ಮತ್ತು ರಕ್ತೇಶ್ವರಿ ಅಮ್ಮನವರ ಮಹಾಪೂಜೆ, ಮಧ್ಯಾಹ್ನ ೧೨.೦೫ಕ್ಕೆ ಶ್ರೀ ಭದ್ರಕಾಳಿ ಅಮ್ಮನವರ ಮಹಾ ಗುರುಧಿ ಪೂಜೆ, ಮಧ್ಯಾಹ್ನ ೨ಕ್ಕೆ ಪ್ರಸಾದ ವಿತರಣೆ, ಸಂಜೆ ೫ಕ್ಕೆ ವಸೂರಿ ಮಾಲಾ ದೇವಿಯ ಮೆರವಣಿಗೆ ಕೋಲಾ ಧಾರಿಗಳು ಕಾವೇರಿ ನದಿಗೆ ತೆರಳುವುದು. ರಾತ್ರಿ ೭ ಗಂಟೆಗೆ ವಸೂರಿಮಾಲ ದೇವಿಯ ಕೋಲವು ವಾದ್ಯಗೋಷ್ಠಿಯೊಂದಿಗೆ ಪುಣ್ಯ ನದಿಯಿಂದ ಮೆರವಣಿಗೆ ಮೂಲಕ ಕರೆತರಲಾಗುವುದು. ರಾತ್ರಿ ೯ಕ್ಕೆ ವಸೂರಿಮಾಲಾ ತೆರೆ, ರಾತ್ರಿ ೧೧ಕ್ಕೆ ಗುಳಿಗನ ತೆರೆ, ರಾತ್ರಿ ೧೨ಕ್ಕೆ ಕರಿ ಚಾಮುಂಡಿ ದೇವಿಗೆ ತೆರೆ ರಾತ್ರಿ ೧೦ ಗಂಟೆಗೆ ಅನ್ನಸಂತರ್ಪಣೆ, ರಾತ್ರಿ ೨ ಗಂಟೆಗೆ ರಕ್ತೇಶ್ವರಿ ದೇವಿಯ ಮಹಾಗುರುಧಿ ಪೂಜೆ ನಡೆಯಲಿದೆ. ತಾ. ೨೬ ರಂದು ಬೆಳಗಿನ ಜಾವ ೪.೩೦ಕ್ಕೆ ಮಹಾರಕ್ತೇಶ್ವರಿ ತೆರೆ, ಬೆಳಿಗ್ಗೆ ೬.೩೦ಕ್ಕೆ ಕುಟ್ಟಿಚಾತನ ತೆರೆ, ೧೧.೩೦ಕ್ಕೆ ವೀರ ಭದ್ರಸ್ವಾಮಿ ತೆರೆ, ಮಧ್ಯಾಹ್ನ ೧.೩೦ಕ್ಕೆ ಶ್ರೀ ಭಗವತಿಯ ತೆರೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.