ಗುಡ್ಡೆಹೊಸೂರು, ಮಾ. ೨೩: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಗೋದಾಮು ಹಾಗೂ ವ್ಯಾಪಾರ ಮಳಿಗೆಗಳ ಉದ್ಘಾಟನೆ ತಾ. ೨೫ ರಂದು ಪೂರ್ವಾಹ್ನ ೧೦ ಗಂಟೆಗೆ ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೋದಾಮು ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನೆರವೇರಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಜಿಲ್ಲಾ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ನೆರವೇರಿಸಲಿದ್ದಾರೆ. ಕುಡಿಯುವ ನೀರಿನ ಘಟಕದ ಗುಡ್ಡೆಹೊಸೂರು, ಮಾ. ೨೩: ಇಲ್ಲಿಗೆ ಸಮೀಪದ ನಂಜರಾಯ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಗೋದಾಮು ಹಾಗೂ ವ್ಯಾಪಾರ ಮಳಿಗೆಗಳ ಉದ್ಘಾಟನೆ ತಾ. ೨೫ ರಂದು ಪೂರ್ವಾಹ್ನ ೧೦ ಗಂಟೆಗೆ ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೋದಾಮು ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನೆರವೇರಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಜಿಲ್ಲಾ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ನೆರವೇರಿಸಲಿದ್ದಾರೆ. ಕುಡಿಯುವ ನೀರಿನ ಘಟಕದಉದ್ಘಾಟನೆಯನ್ನು ಡಿ.ಸಿ.ಸಿ. ಬ್ಯಾಂಕಿನ ಕೇಟೋಳಿರ ಹರೀಶ್ ಪೂವಯ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಯೂನಿಯನ್‌ನ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ನಡೆಸಲಿದ್ದಾರೆ.