ಸಿದ್ದಾಪುರ, ಮಾ. ೨೩: ವಾಲ್ನೂರು-ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ಪೂಜಾ ಕೈಂಕರ್ಯಗಳು ತಾ. ೨೪ ರಿಂದ (ಇಂದಿನಿAದ) ತಾ. ೨೭ ರವರೆಗೆ ನಡೆಯಲಿದೆ. ತಾ. ೨೪ ರಂದು (ಇಂದು) ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ಶ್ರೀದೇವಿ ಬಲಿ ಮಹಾಪೂಜೆ, ತೀರ್ಥಪ್ರಸಾದ, ತಾ. ೨೫ ರಂದು ಮಧ್ಯಾಹ್ನ ೩ ಗಂಟೆಯಿAದ ಪಟ್ಟಣಿ ಎತ್ತುವುದು ಶ್ರೀ ದೇವಿ ಬಲಿ ಅಲಂಕಾರಪೂಜೆ, ಮಹಾಪೂಜೆ, ತೀರ್ಥಪ್ರಸಾದ ಅನ್ನಸಂತರ್ಪಣೆ. ತಾ. ೨೬ ರಂದು ಬೆಳಿಗ್ಗೆ ೧೦.೩೦ಕ್ಕೆ ತುಲಾಭಾರ ಸೇವೆಗಳು, ೧೨ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ಹಾಗೂ ಮಧ್ಯಾಹ್ನ ೩ ಗಂಟೆಯಿAದ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಶ್ರೀ ದೇವಿ ಬಲಿ ಅವಭೃತ ಸ್ನಾನ, ಶ್ರೀ ದೇವಿ ನೃತ್ಯ, ಬಲಿ, ಅಲಂಕಾರ ಪೂಜೆ, ಮಹಾಪೂಜೆ, ತೀರ್ಥಪ್ರಸಾದ ಅನ್ನಸಂತರ್ಪಣೆ. ತಾ. ೨೭ ರಂದು ೯ ಗಂಟೆಯಿAದ ಶುದ್ಧ ಕಲಶ ಮಹಾಪೂಜೆ, ತೀರ್ಥಪ್ರಸಾದ, ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.