ಸೋಮವಾರಪೇಟೆ, ಮಾ. ೨೩: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ರೂ. ೩೫ ಲಕ್ಷ ಅನುದಾನ ಮಂಜೂರಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿAದ ರೂ. ೩೫ ಲಕ್ಷ ಅನುದಾನ ಮಂಜೂರಾಗಿದ್ದು, ಇದರಲ್ಲಿ ವಾರ್ಡ್೮ರ ಜನತಾ ಕಾಲೋನಿಯಲ್ಲಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲು ಶಾಸಕರು ಭೂಮಿಪೂಜೆ ನೆರವೇರಿಸಿದರು. ಜನತಾ ಕಾಲೋನಿಯಲ್ಲಿ ೨.೭೦ ಮೀಟರ್ ಅಗಲ ಹಾಗೂ ೭೫ ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ, ೨೪೧.೫೦ ಮೀಟರ್ ಕಾಂಕ್ರೀಟ್ ಚರಂಡಿ, ೨೦೦೬.೭೫ ಮೀಟರ್ ರಸ್ತೆ ಡಾಂಬರೀಕರಣ ನಡೆಯಲಿದೆ ಎಂದು ಅಪ್ಪಚ್ಚುರಂಜನ್ ತಿಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ವಾರ್ಡ್ ಸದಸ್ಯ ಶುಭಕರ್, ಸದಸ್ಯೆ ನಾಗರತ್ನ, ಮೋಹಿನಿ, ಬಿ.ಆರ್. ಮಹೇಶ್, ಎಸ್. ಮಹೇಶ್, ಶರತ್ಚಂದ್ರ, ಸೋಮೇಶ್, ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.