ಕೂಡಿಗೆ, ಮಾ. ೨೪ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗುಂದದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಬಂಧಿಸಿದೆ. ಹುಲುಗುಂದ ಗ್ರಾಮದ ನಿವಾಸಿ ಸತ್ಯ ಕುಮಾರ್ ಬಂಧಿತ ಆರೋಪಿ.

ಆರೋಪಿ ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಅಕ್ರಮವಾಗಿ ಮಾರಾಟಕ್ಕೆ ಇಟ್ಟಿದ್ದ ೩,೦೬೦ ಲೀ. ಮದ್ಯ ಪತ್ತೆಯಾಗಿದೆ. ಸೋಮವಾರಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕಿ ಆರ್.ಎಂ ಚೈತ್ರಾ, ಪ್ರಕರಣ ದಾಖಲು ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.